ಮಾ.27ರಿಂದ ಸಾಧಾರಣ ಮಳೆ : ಗಾಳಿ ತೀವ್ರತೆ ಹೆಚ್ಚಳ

0
88

ಉಡುಪಿ : ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡದಲ್ಲಿ ಮಾ. 27ರಿಂದ 30ರ ವರೆಗೆ ಕೆಲವೆಡೆ ಜೋರಾದ ಗಾಳಿಯ ಜತೆ ಗುಡುಗು ಸಹಿತ ಸಾಧಾರಣ ಮಳೆ ಬೀಳುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಒಮನ್‌ ಕರಾವಳಿ ಭಾಗಗಳ ಬಳಿ ಹಾಗೂ ಅರಬೀ ಸಮುದ್ರದ ವಾಯುವ್ಯ ಭಾಗದಲ್ಲಿ ಮಾ. 28 ಹಾಗೂ 29ರಂದು ಗಾಳಿಯ ವೇಗ 45ರಿಂದ 55 ಕಿ.ಮೀ. ಹಾಗೂ ಕೆಲವೊಮ್ಮೆ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಮೀನುಗಾರರು ಎಚ್ಚರಿಕೆಯಿಂದ ಇರಬೇಕಾಗಿ ಗೃಹ ವ್ಯವಹಾರಗಳ ಸಚಿವಾಲಯದ ತುರ್ತು ಪರಿಸ್ಥಿತಿಗಳ ಏಕೀಕೃತ ನಿಯಂತ್ರಣ ಕೊಠಡಿಯ (ಇಂಟಿಗ್ರೇಟೆಡ್‌ ಕಂಟ್ರೋಲ್‌ ರೂಂ ಫಾರ್‌ಎಮರ್ಜೆನ್ಸಿ ರೆನ್ಫಾನ್ಸ್‌) ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here