ಮಲಬಾರ್ ಗೋಲ್ಡ್ : ರೂ. 200 ಕೋಟಿ – ಸಿಎಸ್‍ಆರ್ ಯೋಜನೆಗಳಿಗೆ ಚಾಲನೆ

0
50

ಮಂಗಳೂರು : ವಿಶ್ವದ ಐದನೇ ಅತಿ ದೊಡ್ಡ ರೀಟೇಲ್ ಆಭರಣ ಸಮೂಹವಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇಂದು 2026-27ರ ವರ್ಷಕ್ಕೆ ರೂ.200 ಕೋಟಿ ಮೌಲ್ಯದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಯೋಜನೆಗಳನ್ನು ಪ್ರಕಟಿಸಿದೆ.

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಉಪಸ್ಥಿತಿಯಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹಮ್ಮದ್, ಇಂಡಿಯಾ ಆಪರೇಷನ್ಸ್ ವ್ಯವಸ್ಥಾಪಕ ನಿರ್ದೇಶಕ ಒ. ಆಶರ್, ಕಾರ್ಯನಿರ್ವಾಹಕ ನಿರ್ದೇಶಕರಾದ ನಿಶಾದ್ ಎ.ಕೆ. ಮತ್ತು ಅಬ್ದುಲ್ಲಾ ಇಬ್ರಾಹಿಮ್, ಕೇರಳ ಹೌಸ್ ರೆಸಿಡೆಂಟ್ ಕಮಿಷನರ್ ಪುನೀತ್ ಕುಮಾರ್, ಪ್ರಥಮ್ ಸಿಇಒ ರುಕ್ಮಿಣಿ ಬ್ಯಾನರ್ಜಿ ಮತ್ತು ಥನಲ್ ಅಧ್ಯಕ್ಷ ಡಾ.ಇದ್ರಿಸ್ ಉಪಸ್ಥಿತರಿದ್ದರು.

ಯೋಜನೆಯಡಿ ದೇಶದ 33,000 ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ ವಿತರಣೆಗೆ ಸಚಿವರು ಚಾಲನೆ ನೀಡಿದರು. 2026-27ರ ಅವಧಿಯಲ್ಲಿ 15 ಪ್ರಮುಖ ಯೋಜನೆಗಳ 19 ರಾಜ್ಯಗಳ 3,000 ಸ್ಥಳಗಳಲ್ಲಿ ರೂ.200 ಕೋಟಿ ಸಿ.ಎಸ್.ಆರ್. ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಕಾರ್ಯಕ್ರಮಗಳು 2 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಲಭ್ಯವಾಗಲಿದೆ ಎಂದು ಅಹಮ್ಮದ್ ನುಡಿದರು.

ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ರೂ.114 ಕೋಟಿಗಳನ್ನು ಬೀದಿಮಕ್ಕಳಿಗೆ ಮೈಕ್ರೋ ಲನಿರ್ಂಗ್ ಸೆಂಟರ್‍ಗಳು ಮತ್ತು ಬಾಲಕಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ಕಾರ್ಯಕ್ರಮಗಳಿಗೆ ನಿಗದಿಪಡಿಸಲಾಗಿದೆ. ರೂ.30 ಕೋಟಿಗಳನ್ನು ಹಂಗರ್ ಫ್ರೀ ವಲ್ರ್ಡ್ ಯೋಜನೆಯಡಿ ಆಹಾರ ವಿತರಣೆಗೆ ಮೀಸಲಿರಿಸಲಾಗಿದೆ ಮತ್ತು ರೂ.14.2 ಕೋಟಿಗಳನ್ನು ಆರೋಗ್ಯಸೇವಾ ಯೋಜನೆಗಳಿಗೆ ನಿಗದಿಪಡಿಸಲಾಗಿದೆ. `ಗ್ರಾಂಡ್ ಮಾ ಹೋಮ್’ ಯೋಜನೆಯಲ್ಲಿ ಅನಾಥ ತಾಯಂದಿರಿಗೆ ಆಶ್ರಯ ನೀಡುವುದು ಒಳಗೊಂಡು ವಸತಿ ಯೋಜನೆಗಳಿಗೆ ರೂ.25 ಕೋಟಿ ನೀಡಲಾಗುತ್ತದೆ. ಹೆಚ್ಚುವರಿ ರೂ.6.8 ಕೋಟಿಗಳನ್ನು ಇತರೆ ಮಾನವೀಯ ಯೋಜನೆಗಳಿಗೆ ಮತ್ತು ರೂ.10 ಕೋಟಿಯನ್ನು ಪರಿಸರ ಸಂರಕ್ಷಣೆಗೆ ನೀಡಲಾಗುತ್ತದೆ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here