ಕೊಯಿಲ : 28ರಂದು ಬೊಬ್ಬರ್ಯ ನೇಮೋತ್ಸವ

0
7

ಬಂಟ್ವಾಳ : ಇಲ್ಲಿನ ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಮಾ.28ರಂದು ರಾತ್ರಿ 8 ಗಂಟೆಗೆ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ನಡೆಯಲಿದೆ. ಉಡುಪಿ ಜಿಲ್ಲೆಯ ಕಡಲ ತೀರದ ಜನತೆ ಆರಾಧಿಸುತ್ತಿರುವ ಕಾರಣಿಕ ಪ್ರಸಿದ್ಧ ಬೊಬ್ಬರ್ಯ ದೈವವು ಸಂಪ್ರದಾಯದAತೆ ಅಂದು ರಾತ್ರಿ 12 ಗಂಟೆಗೆ ಸಮೀಪದ ತೀರ್ಥಕೆರೆಗೆ ತೆರಳಿ ‘ಗಂಗಾ ಭೇಟಿ’ ನಡೆಸಲಿದೆ.

ಅದೇ ದಿನ ರಾತ್ರಿ 2 ಗಂಟೆಗೆ ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ನೆರವೇರಲಿದೆ. ಮಾ.29 ರಂದು ಮುಂಜಾನೆ 5 ಗಂಟೆಗೆ ಗುಳಿಗ ದೈವದ ಕೋಲ ಮತ್ತು ರಾತ್ರಿ 8 ಗಂಟೆಗೆ ಕೊರಗಜ್ಜ ದೈವದ ಕೋಲ ನಡೆಯಲಿದೆ. ಈ ಎರಡು ದಿನಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕ ವಸಂತ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here