ಕ್ರೇನ್ ಢಿಕ್ಕಿಯಾಗಿ ಪಾದಚಾರಿ ಮಹಿಳೆ ಮೃತ್ಯು

0
37

ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಪಾದಚಾರಿ ಮಹಿಳೆಗೆ ಕ್ರೇನ್ ಢಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಕಾರವಾರ ಮೂಲದ (40) ಮೃತ ಮಹಿಳೆ ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಕಾರದಿಂದ ಖಾಸಗಿ ವಾಹನದಲ್ಲಿ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ಗೊಂಡ ಪುತ್ರಿಯನ್ನು ಕಾರವಾರದತ್ತ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್‌ ಪಡೆದು ಗುಡ್ಡೆಯಂಗಡಿ ಬಳಿಯ ಹೊಟೇಲ್‌ಗೆ ಉಪಾಹಾರಕ್ಕಾಗಿ ತೆರಳಿದ್ದರು. ಆ ವೇಳೆಯಲ್ಲಿ ಪುತ್ರಿ ಕ್ರಿಕೆಟ್ ಬ್ಯಾಟ್ ಬೇಕು ಎಂದಿದ್ದಕ್ಕೆ ಮತ್ತೆ ರಸ್ತೆಯನ್ನು ದಾಟಿ ಮತ್ತೊಂದು ಬದಿಗೆ ತೆರಳಲು ಮುಂದಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.

LEAVE A REPLY

Please enter your comment!
Please enter your name here