ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಮುಖ್ಯಪ್ರಾಣನ 19 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಭಾವಿಯಾಗಿ ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ಆಗಮಿಸುವ ಹನುಮ ಜ್ಯೋತಿ, ವಾನರ ಧ್ವಜ, ಕೌಮೋದಕಿ ಗದೆ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿಗಳ 200 ಕೆಜಿ ತೂಕದ ಪಂಚಲೋಹ ಮೂರ್ತಿ, ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಉಡುಪಿ ಜೋಡುಕಟ್ಟೆಯಲ್ಲಿ ಮಾ. 29ರ ಅಪರಾಹ್ನ 3.30ಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಗಣ್ಯರು ಚಾಲನೆ ನೀಡಲಿದ್ದಾರೆ.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ,ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಗಣ್ಯರಾದ ಕಿದಿಯೂರು ಉದಯ ಕುಮಾರ್ ಶೆಟ್ಟಿ ಕೃಷ್ಣಮೂರ್ತಿ ಆಚಾರ್ಯ, ಕಿಶೋರ್ ಆಳ್ವ ದಿವಾಕರ ಶೆಟ್ಟಿ ಕೊಡವೂರು, ರವಿ ಪಡ್ಡಂ, ರಂಜನ್ ಕಲ್ಕೂರ, ಕೆ. ಸತ್ಯೇಂದ್ರ ಪೈ ಕಟಪಾಡಿ ಉಪಸ್ಥಿತರಿರುವರು.
ಮಾ. 31 ರಿಂದ ಎ. 03ರ ಪರ್ಯಂತ ಶ್ರೀ ಮುಖ್ಯಪ್ರಾಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಎಂದು ಶ್ರೀ ಮುಖ್ಯಪ್ರಾಣ ಪ್ರತಿಷ್ಠಾಪನಾ ಸಮಿತಿ ಮತ್ತು ಶ್ರೀ ಕ್ಷೇತ್ರ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

