ಜೈ ತುಲುನಾಡ್(ರಿ.) ಬೆಂಗಳೂರು : ಅಧ್ಯಕ್ಷರಾಗಿ ವಿನಯ್ ಮಣಿಯಾನ ಆಯ್ಕೆ

0
58

ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ,ಖಜಾಂಜಿಯಾಗಿ ರಂಜನ್ ಯಸ್.ವೈ. ಆಯ್ಕೆ

ಬೆಂಗಳೂರು : ಇಲ್ಲಿನ ಉಪ್ಪಾರ ಪೇಟೆಯ ಸ್ವಾಗತ್ ಹೋಟೆಲ್ ಇಲ್ಲಿ ಜೈ ತುಲುನಾಡ್(ರಿ.) ಬೆಂಗಳೂರು ವಿಭಾಗದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಕಾರ್ಯಕ್ರಮ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶ್ವತ್ ತುಳುವ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

2025-2026ನೇ ಸಾಲಿನಲ್ಲಿ ಸಂಘಟನೆ ಮಾಡಿದ ಕಾರ್ಯಕ್ರಮಗಳ ಬಗ್ಗೆ ಎಲ್ಲಾ ಸದಸ್ಯರಿಗೆ ಉಪಕಾರ್ಯದರ್ಶಿಯಾದ ದಿಯಾ ಇವರು ವಿವರಿಸಿದರು. ಮತ್ತು ಜಮಾ ಖರ್ಚಿನ ಬಗ್ಗೆ ಖಜಾಂಜಿಗಳಾದ ಮೇಘನಾ ಮತ್ತು ಅನುದೀಪ್ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು.

ನಂತರ ಪ್ರಸ್ತುತ ಸಮಿತಿಯ ಅಧ್ಯಕ್ಷರಾದ ನಿಧೀಶ್ ಶೆಟ್ಟಿ ಮಾತನಾಡಿ,ಸಹಕರಿಸಿದ ಎಲ್ಲಾ ಸಮಿತಿ ಪದಾಧಿಕಾರಿಗಳಿಗೆ,ಸಂಘದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.ಇನ್ನು ಮುಂದೆಯೂ ಹೊಸ ಸಮಿತಿಗೂ ಹೀಗೆ ಸಹಕಾರ ಮುಂದುವರಿಸುವಂತೆ ಸದಸ್ಯರಲ್ಲಿ ಕೇಳಿಕೊಂಡರು.ಸಂಘದ ಕಾರ್ಯದರ್ಶಿಯಾದ ರಂಜನ್ ಮಾತನಾಡಿ ಸಂಘಟನೆಗಾಗಿ ದುಡಿದ ಎಲ್ಲರನ್ನು ಸ್ಮರಿಸಿದರು.

ನಂತರ 2025-2026ರ ಸಮಿತಿಯನ್ನು ಜೈ ತುಲುನಾಡ್(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು.ಕೇಂದ್ರ ಸಮಿತಿಯ ಮೇಲ್ವೀಚಾರಣೆಯಲ್ಲಿ ಚುನಾವಣಾ ಪ್ರಕ್ರೀಯೆ ಮತ್ತು ನಾಮಪತ್ರ ಸಲ್ಲಿಸಿರುವವರ ಬಗ್ಗೆ ವಿವರಿಸಿ. ಕಾನೂನಾತ್ಮಕವಾಗಿ ಚುಣಾವಣೆಯನ್ನು ನಡೆಸಲಾಯಿತು.

ಚುಣಾವಣೆಯಲ್ಲಿ ವಿನಯ್ ಮಣಿಯಾನ ಅಧ್ಯಕ್ಷರಾಗಿ ಆಯ್ಕೆಯಾಗಿ,ಎಲ್ಲಾ ಸದಸ್ಯರ ಪೂರ್ಣ ಬೆಂಬಲದೊಂದಿಗೆ ಸಂಘಟನೆಯನ್ನು ಮುಂದುವರಿಸುವ ಜವಬ್ದಾರಿಯನ್ನು ವಹಿಸಿಕೊಂಡರು.

ಉಪಾಧ್ಯಕ್ಷರಾಗಿ ಶರತ್ ಕೊಡವೂರು,ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ,ಜತೆ ಕಾರ್ಯದರ್ಶಿಗಳಾಗಿ ಪ್ರದೀಪ್ ಶೆಟ್ಟಿ,ಮೇಘನಾ ಪೂಜಾರಿ ಮತ್ತೆ ದಿಯಾ ಬೋಳಾರ್ ಆಯ್ಕೆ ಆದರು.ಖಜಾಂಜಿಯಾಗಿ ರಂಜನ್ ಎಸ್ ವೈ, ಉಪ ಖಜಾಂಜಿಗಳಾಗಿ ಸುಧೀರ್ ದೇವಾಡಿಗ ಮತ್ತು ಅರ್ಚನಾ ರೈ,ಸಂಘಟನಾ ಕಾರ್ಯದರ್ಶಿಗಳಾಗಿ ಗುರುಪ್ರಸಾದ್,ಉಪ ಸಂಘಟನಾ ಕಾರ್ಯದರ್ಶಿಗಳಾಗಿ ನಿತೇಶ್ ಬಂಗೇರ,ರಚನಾ ಶೆಟ್ಟಿ ಆಯ್ಕೆ ಆದರು.

ಸಂಸ್ಥಾಪಕ ಸಮಿತಿಯ ಶರತ್ ಕೊಡವೂರು ಕಾರ್ಯಕ್ರಮ ಸ್ವಾಗತಿಸಿ,ವಿಶಾಲ್ ಕೊಡಿಯಲ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಸ್ಥಾಪಕ ಸಮಿತಿಯ ರಕ್ಷಿತ್,ಯತೀಶ್ ಕುಮಾರ್ ಮುಂಡೋಡಿ,ಕುಡ್ಲ ವಿಭಾಗದ ಮಾಜಿ ಅಧ್ಯಕ್ಷರಾದ ಮನಿಶ್,ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷರುಗಳಾದ ಧನಂಜಯ್ ಆಚಾರ್ಯ, ಜಯಪ್ರಸಾದ್ ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here