ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಹೋಲಿ ರೋಸರಿಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ.ರಾಮಕೃಷ್ಣ ಶಿರೂರು ಅವರನ್ನು ಮಹಾಕವಿ ಹರಿಹರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಣಿಬೆನ್ನೂರಿನ ಜನಪರವಾಣಿ ಸಾಹಿತ್ಯ ಸೌರಭ ಬಳಗದ ಸಂಸ್ಥಾಪಕರಾದ ಬಸವರಾಜ ಎಸ್. ಬಾಗೇವಾಡಿ ಮಠ ಅವರು ತಿಳಿಸಿರುತ್ತಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆಯುವ ಜನಪರವಾಣಿ ಸಾಹಿತ್ಯ ಸೌರಭದ ಸಾಹಿತ್ಯ ಸಂಭ್ರಮ-2026 ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿರುತ್ತಾರೆ.
ಶಿಕ್ಷಣ, ಶಿಕ್ಷಕ ಸಂಘಟನಾ ಕ್ಷೇತ್ರ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರಿಂದ ಇನ್ನಷ್ಟು ಶಿಕ್ಷಣ,ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಜನಪರವಾಣಿ ಸಾಹಿತ್ಯ ಸೌರಭದ ಸಂಸ್ಥಾಪಕರಾದ ಬಸವರಾಜ ಎಸ್. ಬಾಗೇವಾಡಿ ಮಠ ರಾಣೆಬೆನ್ನೂರು, ಗೌರವಾಧ್ಯಕ್ಷರಾದ ಡಾ.ಅಘೋರಿ ಚಿದಂಬರ ಯೋಗಿ ದಾವಣಗೆರೆ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಸುನಿತಾ ಸಂಗಮ ಬೀದರ್ ಅಭಿನಂದಿಸಿ ಶುಭ ಹಾರೈಸಿದ್ದಾರೆ.

