ಪಿಲಿಂಗಾಲು : ಶ್ರೀ ಗಾಯತ್ರೀ ದೇವಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಉತ್ಸವ ಸಮಾಪನ

0
13

ಬಂಟ್ವಾಳ : ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ 20 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 52 ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಮಂಗಳವಾರ ರಾತ್ರಿ ಸಮಾಪನಗೊಂಡಿತು.

ಶ್ರೀಲಕ್ಷ್ಮೀ ಸಹಿತ ದಶಭುಜ ಮಹಾಗಣಪತಿಗೆ ಗಣಯಾಗ, ಗುರು ರಾಘವೇಂದ್ರ ಸ್ವಾಮಿಗೆ ಗುರುಪೂಜೆ, ಗಾಯತ್ರಿ ದೇವಿಗೆ ಪ್ರಧಾನ ಕಲಶಾಭಿಷೇಕ ಸಹಿತ ಗಾಯತ್ರೀ ಯಾಗ ನಡೆಯಿತು. ಇದೇ ವೇಳೆ ಆಶ್ಲೇಷಾ ಬಲಿ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ರಂಗಪೂಜೆ, ಅಣ್ಣಪ್ಪ ಪಂಜುರ್ಲಿ ಸಹಿತ ಪರಿವಾರ ದೈವಗಳಿಗೆ ಪರ್ವ, ಕಟೀಲು ಮೇಳದಿಂದ ಯಕ್ಷಗಾನ ಬಯಲಾಟ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಉತ್ಸವ ಸಮಿತಿ ಅಧ್ಯಕ್ಷ ಟಿ.ಹರೀಂದ್ರ ಪೈ ನೈನಾಡು, ಮಾಜಿ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಭಜನಾ ಸಮಿತಿ ಅಧ್ಯಕ್ಷ ಕೀರ್ತನ್ ಪೂಜಾರಿ, ಮಾಜಿ ಅಧ್ಯಕ್ಷ ಜಯ ಪೂಜಾರಿ ಮತ್ತಿತರರು ಇದ್ದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಮಾಜಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ, ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ನಿರ್ದೇಶಕ ಭುವನೇಶ್ ಮೊಗರ್ನಾಡು, ನಿವೂತ್ತ ಪಿಡಿಒ ವೇದವ ಗಾಣಿಗ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಪ್ರಮುಖರಾದ ಕೆ.ಬಾಬು ಸಪಲ್ಯ ಕಾಡಬೆಟ್ಟು, ಮೋಹನದಾಸ ಗಟ್ಟಿ, ಕೇಶವ ಶೆಟ್ಟಿ ಕಂದಾಡಿ, ಸೀತಾರಾಮ ಅಗೋಳಿಬೆಟ್ಟು, ಸದಾನಂದ ಗೌಡ ನಾವೂರ, ಪ್ರವೀಣ ಅಂತರ, ಜಯರಾಮ ಕುಲಾಲ್ ಉರುಡಾಯಿ, ಚಿದಾನಂದ ನಾಯ್ಕ್, ಚೇತನ್ ಕುಮಾರ್ ಮತ್ತಿತರರು ಪಾಲ್ಗೊಂಡರು.

LEAVE A REPLY

Please enter your comment!
Please enter your name here