ಕಾರ್ಕಳ : ನಕ್ಸಲ್ ನಿಗ್ರಹ ಪಡೆಯಲ್ಲಿ ಸೇವೆ – ಮಂಜುನಾಥ ದೇವರಮನೆ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರಧಾನ

0
60
ಪೊಲೀಸ್ ಧ್ವಜಾದಿನದ ಪ್ರಯುಕ್ತ ಮುಖ್ಯಮಂತ್ರಿ ಪದಕವನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಸ್ವೀಕರಿಸಿದ ಕ್ಷಣ.....

ಕಾರ್ಕಳ : ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನೀಡಲಾಗುವ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಕಾರ್ಕಳದ ಆರ್‌.ಎಸ್‌.ಐ ಮಂಜುನಾಥ ದೇವರಮನೆ ಆಯ್ಕೆಯಾಗಿದ್ದು, ಅವರು ಈ ಗೌರವವನ್ನು ಪಡೆದುಕೊಂಡಿದ್ದಾರೆ.

ನಕ್ಸಲ್ ನಿಗ್ರಹ ಪಡೆಯಲ್ಲಿ ತಮ್ಮ ಅಪ್ರತಿಮ ಸೇವೆಗಾಗಿ 2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿರುತ್ತಾರೆ. ತಮ್ಮ ಕರ್ತವ್ಯನಿಷ್ಠೆ, ಧೈರ್ಯ ಮತ್ತು ಶ್ರೇಷ್ಠ ಸೇವಾ ಮನೋಭಾವದಿಂದ ಗಮನಾರ್ಹ ಸಾಧನೆ ಮಾಡಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸಿರುವುದು ಈ ಪ್ರಶಸ್ತಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ನೀಡುವ ಈ ಚಿನ್ನದ ಪದಕವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರತಿಷ್ಠಿತ ಗೌರವವಾಗಿದ್ದು, ಮಂಜುನಾಥ ದೇವರಮನೆ ಅವರ ಸಾಧನೆಗೆ ಇದು ಮತ್ತೊಂದು ಮೈಲುಗಲ್ಲಾಗಿದೆ.

ಇವರ ಸಾಧನೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

LEAVE A REPLY

Please enter your comment!
Please enter your name here