ಮೂಡುಬಿದಿರೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುನಂದಾ ಅವರಿಗೆ ನೂತನ ಮನೆ ಹಸ್ತಾಂತರ

0
58

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ)ಮೂಡುಬಿದಿರೆ ತಾಲೂಕು ವತಿಯಿಂದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ,ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಮೂಡುಬಿದ್ರಿ ತಾಲೂಕಿನ ಶಿರ್ತಾಡಿ ವಲಯದ ಮಾಂಟ್ರಾಡಿ ಗ್ರಾಮದ ಈಗಾಗಲೇ ಪ್ರತಿ ತಿಂಗಳು ಮಾಶಾಸನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯರಾದ ಸುನಂದಾ ರವರ ವಾತ್ಸಲ್ಯ ಮನೆಯನ್ನು ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ. ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಮೂಲಕ ಮಾಶಾಸನ ನೀಡುತ್ತಿರುವ ಸದಸ್ಯರ ಪರಿಸ್ಥಿತಿಯನ್ನು ಗಮನಿಸಿದ ಮಾತೃಶ್ರೀ ಅಮ್ಮನವರು ವಾತ್ಸಲ್ಯ ಮನೆ ನಿರ್ಮಿಸಿ ಅವರ ಬದುಕಿಗೆ ಬೆಳಕನ್ನು ನೀಡಿದ್ದು ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಸುನಂದಾ ರವರ ಮನೆಯನ್ನು ಗುರುತಿಸಿ, ಸುಂದರವಾದ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿ ಈ ಮನೆಯನ್ನು ಹಸ್ತಾಂತರಿಸಲು ಸಂತೋಷವಾಗುತ್ತದೆ.

ಅದೇ ರೀತಿ ವಾತ್ಸಲ್ಯ ಕಾರ್ಯಕ್ರಮ ದಲ್ಲಿ ಒದಗಿಸಲಾಗುವ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಸುಮಾರು 20000 ಬಡ ಕುಟುಂಬ ಗಳಿಗೆ ಪ್ರತಿ ತಿಂಗಳು ಮಾಶಾಸನ ವಿತರಣೆ ಆಗಿತ್ತಿದೆ, ವಾತ್ಸಲ್ಯ ಕಿಟ್, ವಾತ್ಸಲ್ಯ ಮಿಕ್ಸ್ ವಿತರಣೆ ಕೂಡ ಆಗುತ್ತಿದೆ ಎಂದರು. ಈ ಮನೆಯಲ್ಲಿ ಸುನಂದಾ ರವರ ಕುಟುಂಬ ಉತ್ತಮ ರೀತಿಯಲ್ಲಿ ಬಾಳಿ ಬದುಕುವಂತೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನೆಲ್ಲಿಕಾರು ಪಂಚಾಯತ್ ಅಧ್ಯಕ್ಷರಾದ ಉದಯ ಪೂಜಾರಿಯವರು ಭಾಗವಹಿಸಿ ವಾಸಕ್ಕೆ ಮನೆ ಇಲ್ಲದ ಬಡ ಕುಟುಂಬಕ್ಕೆ ಆಸರೆ ನೀಡಿದ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯ ಕಾರ್ಯಕ್ರಮ ಶ್ಲಾಘನೀಯ ಎಂದರು. ಇನ್ನೊರ್ವ ಅತಿಥಿಗಳಾಗಿ ಭಾಗವಹಿಸಿದ ಮಹಾವೀರ ಹೆಗ್ಡೆ, ತಾಲೂಕು ಜನಜಾಗ್ರತಿಯ ಸದಸ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಜಯಂತ್ ಹೆಗ್ಡೆ, ಶಶಿಧರ್, ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಲಕ್ಷ್ಮಣ್ ಸುವರ್ಣ, ವಲಯದ ಅಧ್ಯಕ್ಷರಾದ ಕಿರಣ್, ಮಾಂಟ್ರಾಡಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ವಿಠ್ಠಲ್ ಆಚಾರ್ಯ, ವಿಮಾ ಸಮನ್ವಯಧಿಕಾರಿ ಹೇಮಲತಾ ಹೆಗ್ಡೆ, ವಲಯದ ಮೇಲ್ವಿಚಾರಕಿ ಪುಷ್ಪ, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಬಿ ಧನಂಜಯ್ ರವರು ಸ್ವಾಗತಿಸಿ , .ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ವಿದ್ಯಾ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here