ಬಂದಾರು : ಏಪ್ರಿಲ್ 02 ರಿಂದ 10 ರವರೆಗೆ ನಡೆಯುವ ಬಂದಾರು-ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಏಪ್ರಿಲ್ 03 ರಂದು ಬೆಳಗ್ಗೆ ಗೊನೆ ಮುಹೂರ್ತ, ಶ್ರೀ ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ,ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ
ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಸರ್ವ ಸದಸ್ಯರು, ಆಡಳಿತಾಧಿಕಾರಿ, ಜಾತ್ರೋತ್ಸವ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಯಕ್ಷಗಾನ ಬಯಲಾಟ ಸಮಿತಿ, ತಂತ್ರಿಗಳು,ಅರ್ಚಕರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

