ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಬಸವ ಜಯಂತಿ ಪ್ರಯುಕ್ತ “ಅಂಚೆ ಕುಂಚ” ರಾಜ್ಯ ಮಟ್ಟದ ಉಚಿತ ಚಿತ್ರ ಬರೆಯುವ ಸ್ಪರ್ಧೆಗೆ ಆಹ್ವಾನಿಸಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ತಿಳಿಸಿದ್ದಾರೆ.
50 ಪೈಸೆ ಅಂಚೆ ಕಾರ್ಡಿನಲ್ಲಿ ಶ್ರೀ ಬಸವನ ಚಿತ್ರ ಬರೆದು ಈ ಕೆಳಗಿನ ವಿಳಾಸಕ್ಕೆ 25-4-2026ರೊಳಗೆ ಅಂಚೆ ಮೂಲಕ ಕಳಿಸಬೇಕಾಗಿದೆ. ಯಾವುದೇ ವಯೋಮಿತಿ ಇಲ್ಲದೇ ವಯೋಮಾನದಂತೆ ವಿಂಗಡಿಸಿ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ ಫಲಿತಾಂಶ ಅಭಿನಂದನಾ ಪತ್ರ ಕಳಿಸುತ್ತೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಅಂಚೆ ಕಾರ್ಡಿನಲ್ಲಿ ಬಸವಣ್ಣನ ಚಿತ್ರ ಬರೆದು ಕಳಿಸುವ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ “ಕನ್ನಡ ಕೃಪಾ” ಕುವೆಂಪು ರಸ್ತೆ, ಕೆ.ಬಿ.ಬಡಾವಣೆ, ದಾವಣಗೆರೆ-577002. ಚಿತ್ರ ಬರೆದು ಯುವ ಹಿರಿಯ ಕಿರಿಯ ಕಲಾವಿದರು ಕನ್ನಡದಲ್ಲಿ ತಮ್ಮ ಮನೆಯ ಪೂರ್ಣ ಪ್ರಮಾಣದ ವಿಳಾಸ, ಹೆಸರು, ವಯಸ್ಸು, ವ್ಯಾಟ್ಸಪ್ ಸಂಖ್ಯೆಯನ್ನು ಹಾಕಬೇಕು. ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು. ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

