ಮೂಡುಬಿದಿರೆ : ಮಹಾರಾಷ್ಟ್ರದ ಬಲ್ಹಾರಷ್‌ನಲ್ಲಿ ಏಪ್ರಿಲ್ 3ರಿಂದ ನಡೆಯುತ್ತಿರುವ 2025-26ನೇ ಸಾಲಿನ ರಾಷ್ಟ್ರಮಟ್ಟದ 19ನೇ ಫ್ಲೋರ್‌ಬಾಲ್ ಚಾಂಪಿಯನ್ ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಮೂಡುಬಿದಿರೆಯ ಶ್ರೀ ಮಹಾವೀರಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ಕು. ವಿಕ್ರೀತ ಇವರುಆಯ್ಕೆಯಾಗಿರುತ್ತಾರೆ.
ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅಕ್ಷಿತ್‌ರೈ ತರಬೇತಿ ನೀಡಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ-ಅಧ್ಯಾಪಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

