ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಯುರೇಕಾ-2026 ಶಿಬಿರದ ಮೂರನೇ ದಿನ – ʻUnveiling the Elements of Changeʼ ಹಾಗೂ ʻMind Mattersʼ ಕಾರ್ಯಾಗಾರ

0
12

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ವ್ಯಕ್ತಿತ್ವ ವಿಕಸನ ಶಿಬಿರ ಯುರೇಕಾ –2026 ರಮೂರನೇ ದಿನದ ಪ್ರಥಮ ಅವಧಿಯಲ್ಲಿ ರಸಾಯನ ಶಾಸ್ತ್ರದ ಮೂಲಭೂತ ಧಾತುಗಳು, ಆವರ್ತಕ ಕೋಷ್ಟಕ , ನಿತ್ಯ ಜೀವನದಲ್ಲಿ ರಸಾಯನ ಶಾಸ್ತ್ರದ ಬಳಕೆ ಹಾಗೂ ಅನ್ವಯಗಳ ಕುರಿತುವಿವೇಕಾನಂದ ಪದವಿಪೂರ್ವ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ನಳಿನ ಕುಮಾರಿ ಎಸ್ ಇವರು “Unveiling the Elements of Change ” ಶೀರ್ಷಿಕೆಯಡಿ ವಿಶೇಷ ಕಾರ್ಯಾಗಾರವನ್ನು ನೆರವೇರಿಸಿಕೊಟ್ಟರು.

ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರದ ಮೂಲಭೂತ ತತ್ವಗಳನ್ನು ಸರಳವಾಗಿ ಅರ್ಥೈಸಿದರು. ಧಾತುಗಳ ಸ್ವಭಾವ, ಅವುಗಳ ಗುಣಲಕ್ಷಣಗಳು ಹಾಗೂ ಆವರ್ತಕ ಕೋಷ್ಟಕದ ವಿನ್ಯಾಸ ಮತ್ತು ಅದರ ಮಹತ್ವವನ್ನು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿದರು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ರಸಾಯನ ಶಾಸ್ತ್ರದ ಮಹತ್ವವನ್ನು ಅರಿತುಕೊಂಡರು. ಎರಡನೇ ಅವಧಿಯಲ್ಲಿ ಜೀವಶಾಸ್ತ್ರ ಹಾಗೂ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳಿಗಾಗಿ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು.

ಅಪರಾಹ್ನದ ಬಳಿಕ “Mind Matters” ಎಂಬ ಮನೋವಿಜ್ಞಾನ ಆಧಾರಿತ ವಿಶೇಷ ಅವಧಿಯನ್ನು ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುವ ಉದ್ದೇಶದಿಂದ ಆಯೋಜಿಸಲಾಯಿತು. ಈ ಅವಧಿಯನ್ನು ವಿವೇಕಾನಂದ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗÀ ಮುಖ್ಯಸ್ಥರಾದ ಚಂದ್ರಕಾಂತ ಗೋರೆ ಇವರು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ? ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದರ ಅಗತ್ಯತೆ ಹಾಗೂ ಮನೋ ನಿಯಂತ್ರಣ ಕುರಿತಾದ ವಿಷಯಗಳನ್ನು ಹಲವು ಚಟುವಟಿಕೆಗಳ ಮೂಲಕ ಶಿಬಿರಾರ್ಥಿಗಳಿಗೆ ಮನದಟ್ಟುಮಾಡಿದರು. ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here