ಬೆಂಗಳೂರು : ಪಿಯುಸಿ ವಿದ್ಯಾರ್ಥಿನಿ ತನುಶ್ರೀ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ತನುಶ್ರೀ ಮೃತದೇಹ ಪತ್ತೆಯಾದ ಬಳಿಕ ಕೆಲವರು ಆಕೆಯ ತಾಯಿ ಮೇಲೆ ಸಂಶಯ ವ್ಯಕ್ತಪಡಿಸಿದ್ರು. ಆದ್ರೆ ತನುಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಎಂಎಸ್ ಡಿಗ್ರಿ ಕಾಲೇಜ್ನಲ್ಲಿ ತನುಶ್ರೀ ವ್ಯಾಸಂಗ ಮಾಡ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಸೈನ್ಸ್ ಸ್ಟೂಡೆಂಟ್ ಆಗಿದ್ದ ತನುಶ್ರೀ, ನಿನ್ನೆ ಪ್ರಕಟಗೊಂಡ ಸೆಕೆಂಡ್ ಪಿಯುಸಿ ಪರೀಕ್ಷೆ ರಿಸ್ಟಲ್ಟ್ ನೋಡಿದ ಬಳಿಕವೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ತನುಶ್ರೀ ದ್ವಿತೀಯ ಪಿಯುಸಿಯ ಗಣಿತ ಹಾಗೂ ರಾಸಯಾನಶಾಸ್ತ್ರ ಈ ಎರಡು ವಿಷಯಗಳಲ್ಲೂ ಫೇಲ್ ಆಗಿದ್ದಾಳೆ.
ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆ ಮನನೊಂದು ಮನೆಯಲ್ಲಿಯೇ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸಾಯುವ ಮುನ್ನ ತನುಶ್ರೀ ನಾನು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದೇನೆ ಎಂದು ಫ್ರೆಂಡ್ಗೆ ಮೆಸೇಜ್ ಮಾಡಿದ್ದಳಂತೆ.
3 PM fielding set ಎಂದು ಮೊಬೈಲ್ ಸ್ಟೇಟಸ್ ಹಾಕಿದ್ದ ತನುಶ್ರೀ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ತನುಶ್ರೀ ಸ್ಟೇಟಸ್ ನೋಡಿ ಸ್ನೇಹಿತೆ ಮನೆ ಬಳಿ ಓಡಿ ಬಂದಿದ್ದು, ಅಷ್ಟರಲ್ಲಿ ತನುಶ್ರೀ ನೇಣಿಗೆ ಶರಣಾಗಿದ್ದಳು.
ಕೂಡಲೇ ತನುಶ್ರೀ ಸ್ನೇಹಿತೆ ತನ್ನ ತಂದೆ ಅಂಥೋನಿಗೆ ಕರೆ ಮಾಡಿ ತಿಳಿಸಿದ್ದಾರೆ. ತನುಶ್ರೀ ಸ್ನೇಹಿತೆ ಹಾಗೂ ತಂದೆ ಅಂಥೋನಿ ಡೋರ್ ಒಡೆದು ಒಳ ಹೋಗಿ ಬಳಿಕ ಉಸಿರಾಡ್ತಿದ್ದ ತನುಶ್ರೀಯನ್ನ ಕೂಡಲೇ ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ರಂತೆ. ಆದ್ರೆ ಮಾರ್ಗ ಮಧ್ಯೆಯೇ ವಿದ್ಯಾರ್ಥಿನಿ ತನುಶ್ರೀ ಸಾವನ್ನಪ್ಪಿದ್ದಾಳೆ.
ಪೊಲೀಸರ ತನಿಖೆ ವೇಳೆ ಪಿಯುಸಿ ಫೇಲ್ ಆಗಿದ್ದಕ್ಕೆ ತನುಶ್ರೀ ಸೂಸೈಡ್ ಮಾಡಿಕೊಂಡಿರೋದು ಗೊತ್ತಾಗಿದೆ. ಹೆಬ್ಬಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, UDR ದಾಖಲಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ನಿನ್ನೆ ರಿಸಲ್ಟ್ ಇತ್ತು. ನಮ್ಮ ರಿಸಲ್ಟ್ ನೋಡಿದ ಬಳಿಕ ತನುಶ್ರೀಗೆ ಫೋನ್ ಮಾಡಿದೆ.ಸ್ವಿಚ್ ಆಫ್ ಬಂತು, ಎಷ್ಟು ಕರೆ ಮಾಡಿದ್ರು ಸ್ವಿಚ್ ಆಫ್ ಬರ್ತಿದ್ದಕ್ಕೆ ಮನೆ ಹತ್ರ ನಾನು ತಮ್ಮ ಬಂದಿದ್ವಿ. ನಾವಿಬ್ಬರು ಬಂದು ಕಿಟಕಿಯಲ್ಲಿ ನೋಡಿದಾಗ ನೇಣು ಹಾಕೊಂಡಿರೋದು ಕಾಣ್ತು. ಕೂಡಲೇ ನಮ್ಮ ಅಪ್ಪನಿಗೆ ಫೋನ್ ಮಾಡಿ ಬಳಿಕ ಅವರು ಡೋರ್ ಒಡೆದು ಒಳಗೆ ಹೋದರು. ಅಲ್ಲೇ ಬೆಡ್ ಮೇಲೆ ಫೋನ್, ಹಾಲ್ ಟಿಕೆಟ್ ಇತ್ತು. ತನುಶ್ರೀಯನ್ನ ವೇಲ್ ನಿಂದ ಕೆಳಗೆ ಇಳಿಸಿ ಆಸ್ಪತ್ರೆಗೆ ಕರ್ಕೊಂಡ್ ಹೋದ್ವಿ.ಈಗಾಗಲೇ ಸತ್ತಿದ್ದಾಳೆ ಅಂತ ಆಸ್ಪತ್ರೆಯವರು ಹೇಳಿದ್ರು ಎಂದು ತನುಶ್ರೀ ಸ್ನೇಹಿತೆ ಘಟನೆ ಬಗ್ಗೆ ವಿವರಿಸಿದ್ದಾರೆ.

