3ರಿಂದ 15 ವಯಸ್ಸಿನ ಮಕ್ಕಳಿಗೆ ವೇದಿಕೆ: ಮತ್ತೆ ಬರುತ್ತಿದೆ ಜೀ ಕನ್ನಡದಲ್ಲಿ ‘ಸರಿಗಮಪ ಲಿಟ್ಲ್ ಚಾಂಪ್ಸ್’

0
28

ಸರಿಗಮಪ ಲಿಟ್ಲ್ ಚಾಂಪ್ಸ್ ಮತ್ತೆ ಕನ್ನಡದ ಮನೆಮಾತಾಗಲು ಸಜ್ಜಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಈ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.

ಇತ್ತೀಚೆಗೆ ಜೋಡಿ ನಂ.1 ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮುಂತಾದ ಶೋಗಳು ಗಮನ ಸೆಳೆದಿದ್ದರೆ, ಇದೀಗ ಪುಟ್ಟ ಮಕ್ಕಳ ಗಾಯನ ಪ್ರತಿಭೆಗೆ ವೇದಿಕೆ ಸಿಗುತ್ತಿದೆ.

ಈ ಬಾರಿಯ ಪ್ರಮುಖ ವಿಶೇಷತೆ ಎಂದರೆ 3 ವರ್ಷದಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನೊಂದು ವಿಶೇಷ ಅಂಶವೆಂದರೆ, ಸ್ಪರ್ಧಿಗಳನ್ನು ಆಯ್ಕೆ ಮಾಡಲು ಕೇವಲ ಬೆಂಗಳೂರುನಲ್ಲಿ ಮಾತ್ರ ಆಡಿಷನ್ ನಡೆಸದೆ, ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಿ ಪ್ರತಿಭಾವಂತರನ್ನು ಹುಡುಕಲಾಗಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೂ ಅವಕಾಶ ಸಿಕ್ಕಿದೆ.

ಶೋನ ಮತ್ತೊಂದು ಹೈಲೈಟ್ ಎಂದರೆ ತೀರ್ಪುಗಾರರು. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಅವರು ಜಡ್ಜ್‌ಗಳಾಗಿ ಕಾಣಿಸಿಕೊಳ್ಳಲಿದ್ದು, ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಇನ್ನು ಜನಪ್ರಿಯ ನಿರೂಪಕಿ ಅನುಶ್ರೀ ಈ ಶೋನನ್ನು ನಿರೂಪಿಸಲಿದ್ದಾರೆ. ಮಕ್ಕಳ ಜೊತೆ ಮಗುವಿನಂತೆ ಬೆರೆತು ಮಾತನಾಡುವ ಅವರ ಶೈಲಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.

ಒಟ್ಟಿನಲ್ಲಿ, ‘ಸರಿಗಮಪ ಲಿಟ್ಲ್ ಚಾಂಪ್ಸ್’ ಈ ಬಾರಿ ಇನ್ನಷ್ಟು ವೈವಿಧ್ಯತೆ ಮತ್ತು ಹೊಸತನದೊಂದಿಗೆ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.

LEAVE A REPLY

Please enter your comment!
Please enter your name here