ನಾಳೆ (ಏ.19)ರಂದು ತುಳುನಾಡ ಕಳರಿ ಆಧಾರಿತ ದೇಹದ ಅಸ್ಥಿ ಮತ್ತು ನಾಡಿ ಸಮತೋಲನ ಶಿಬಿರ

0
48

ಯಾವುದೇ ಔಷದ ಮತ್ತು ಯಂತ್ರೋ ಉಪಕರಣಗಳ ಸಹಾಯವಿಲ್ಲದೆ ಪ್ರಾಕೃತಿಕವಾಗಿ ರೋಗ ಮುಕ್ತರಾಗಿ ಜೀವಿಸಬಹುದು

ತುಳುವರ್ಲ್ಡ್ ಫೌಂಡೇಶನ್ ಕಟೀಲ್ ವತಿಯಿಂದ ತುಳು ನಾಡಿನ ಪ್ರಾಚೀನ ಕಳರಿ ವಿದ್ಯೆ ಮತ್ತು ನಾಡಿ ಶಕ್ತಿ ತತ್ವಗಳ ಆಧಾರದಲ್ಲಿ ಒಂದು ದಿನದ ವಿಶೇಷ ದೇಹ ಸಮತೋಲನ ಮತ್ತು ನಾಡಿ ಶಕ್ತಿ ಚಿಕಿತ್ಸಾ ಶಿಬಿರವನ್ನು ಏಪ್ರಿಲ್ 19ರಂದು ಬೆಳಿಗ್ಗೆ 10 ಗಂಟೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಡಿಗ್ರಿ ಕಾಲೇಜು, ತುಳುವರ್ಲ್ಡ್ ಕಚೇರಿಯಲ್ಲಿ ಆಯೋಜಿಸಲಾಗಿದೆ.

ಈ ಶಿಬಿರವನ್ನು ಆಂಧ್ರ ಪ್ರದೇಶ ತಿರುಪತಿಯ ಪ್ರಸಿದ್ಧ ಹೀಲಿಂಗ್ ತಜ್ಞರಾದ ವೈದ್ಯಶ್ರೀ. ಸತ್ಯನಾರಾಯಣ ಅವರು ನಡೆಸಿಕೊಡಲಿದ್ದು, ಅವರಿಗೆ 30 ವರ್ಷಗಳಿಗಿಂತ ಹೆಚ್ಚು ಅನುಭವವಿದೆ. ಅವರು ನಾಡಿ ವೈದ್ಯಂ (Energy-based healing) ಮೂಲಕ ಯಾವುದೇ ಔಷಧಿ, ಇಂಜೆಕ್ಷನ್ ಅಥವಾ ಯಂತ್ರೋಪಕರಣಗಳಿಲ್ಲದೆ ದೇಹದ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿದ್ದಾರೆ.

ದೇಹದ ರಹಸ್ಯ – ನಾಡಿ ಮತ್ತು ಅಸ್ಥಿ ಸಮತೋಲನ
ತುಳುನಾಡನ್ ಕಳರಿ ಪರಂಪರೆಯ ಪ್ರಕಾರ, ಮಾನವ ದೇಹದಲ್ಲಿ ಸುಮಾರು 72,000 ನರ ನಾಡಿಗಳು (Energy Channels) ಹರಡಿಕೊಂಡಿವೆ ಎಂದು ಪರಿಗಣಿಸಲಾಗಿದೆ. ಈ ನಾಡಿಗಳು ದೇಹದ ಎಲ್ಲಾ ಭಾಗಗಳಿಗೆ ಪ್ರಾಣಶಕ್ತಿ (Life Energy) ಅನ್ನು ಸಾಗಿಸುತ್ತವೆ. ಇದರ ಜೊತೆಗೆ, ನಮ್ಮ ದೇಹದ ಅಸ್ಥಿ ಪಂಜರ (Skeletal System) ದೇಹದ ಮೂಲ ಚೌಕಟ್ಟು ಆಗಿದ್ದು,
ದೇಹಕ್ಕೆ ಆಕಾರ ನೀಡುತ್ತದೆ ಹಾಗೂ ಒಳಾಂಗಾಂಗಗಳನ್ನು ರಕ್ಷಿಸುತ್ತದೆ ಮತ್ತು ನಾಡಿಗಳ ಸರಿಯಾದ ಕಾರ್ಯಚಟುವಟಿಕೆಗೆ ಬೆಂಬಲ ನೀಡುತ್ತದೆ.

ನಾಡಿಗಳು ಮತ್ತು ಅಸ್ಥಿಗಳ ಸಮತೋಲನವೇ ಆರೋಗ್ಯದ ಮೂಲವಾಗಿದೆ ಸಮತೋಲನ ತಪ್ಪಿದಾಗ… ನಾಡಿಗಳಲ್ಲಿ ಶಕ್ತಿ ಹರಿವು ಅಡಚಣೆಗೊಳ್ಳುತ್ತದೆ ನರ ವ್ಯವಸ್ಥೆ ದುರ್ಬಲಗೊಳ್ಳುತ್ತದೆ
ಚಕ್ರಗಳ ಶಕ್ತಿ ಕುಂದುತ್ತದೆ ದೇಹದಲ್ಲಿ ವಿವಿಧ ರೋಗಗಳು ಉಂಟಾಗುತ್ತವೆ.

ಶಿಬಿರದ ಮೂಲಕ ನೀಡುವ ತರಬೇತಿ

*ಅಸ್ಥಿ ಪಂಜರದ ಸಮತೋಲನ ಪುನಃಸ್ಥಾಪನೆ

*72,000 ನಾಡಿಗಳ ಶಕ್ತಿ ಹರಿವು ಜಾಗೃತಿ

*ದೇಹದ ಸ್ವಯಂ ಗುಣಪಡಿಸುವ ಶಕ್ತಿ ಅಭಿವೃದ್ಧಿ

*ಸರಿಯಾದ ಕುಳಿತುಕೊಳ್ಳುವ, ನಿಲ್ಲುವ, ನಡೆಯುವ ಹಾಗೂ ಮಲಗುವ ವಿಧಾನಗಳಿಂದಲೇ ನಮ್ಮ ಶರೀರವನ್ನು ಸರಳ ರೀತಿಯಲ್ಲಿ ರಕ್ಷಿಸಬಹುದಾದ ವಿಧಾನಗಳು ಬಗ್ಗೆ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತದೆ.

ಆರೋಗ್ಯ ಲಾಭಗಳು

ಸರ್ವೈಕಲ್, ಸೈಟಿಕಾ, ಸ್ಪಾಂಡಿಲೈಟಿಸ್, ನರ ಸಮಸ್ಯೆಗಳು, ಡಯಾಬಿಟಿಸ್, ಥೈರಾಯ್ಡ್, ಜಾಯಿಂಟ್ ಪ್ರಾಬ್ಲಮ್, ಲಿವರ್ ಪ್ರಾಬ್ಲಮ್, ಕಿಡ್ನಿ ಪ್ರಾಬ್ಲಮ್ IBS ಸೇರಿದಂತೆ ಹಲವು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಅರಿವು ಮತ್ತು ಪರಿಹಾರ ಮಾರ್ಗಗಳನ್ನು ತಿಳಿದುಕೊಳ್ಳಲು ಈ ಶಿಬಿರ ಸಹಾಯಕವಾಗಲಿದೆ.

ದೇಹದ ನಾಡಿ ಮತ್ತು ಅಸ್ಥಿ ಸಮತೋಲನ ಸರಿಯಾದರೆ ದೇಹವು ಸ್ವತಃ ತನ್ನನ್ನು ಗುಣಪಡಿಸಿಕೊಳ್ಳುತ್ತದೆ. ಈ ಪ್ರಾಚೀನ ಜ್ಞಾನದಿಂದ ದೇಹದ ಸುಮಾರು 80% ರೋಗಗಳನ್ನು ನಿಯಂತ್ರಿಸಬಹುದು.

ಅರಿವು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. 10 ವರ್ಷದಿಂದ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ನಿಮ್ಮ ಹೆಸರು ನೋಂದಾವಣೆಗೆ ಸಂಪರ್ಕಿಸಿ:
ಅರವಿಂದ ಬೆಳ್ಚಾಡ
9964026196

ರಾಕೇಶ್ ಶೆಟ್ಟಿ
98440 22201

ಹರಿಪ್ರಸಾದ್ ರೈ ಜಿಕೆ
86603 77357

LEAVE A REPLY

Please enter your comment!
Please enter your name here