
ಕಾರ್ಕಳ : ನಿಟ್ಟೆ ಯಲ್ಲಿ ಮಕ್ಕಳ ಬೇಸಿಗೆ ಶಿಬಿರ ಕಾರ್ಕಳ : ನಿಟ್ಟೆ ಬ್ರಹ್ಮಕುಮಾರೀಸ್ ವೃಂದಾವನ ಧ್ಯಾನ ಕೇಂದ್ರದಲ್ಲಿ 5 ದಿನಗಳ ಬೇಸಿಗೆ ಶಿಬಿರ ಏಪ್ರಿಲ್ 28ರಂದು ಪ್ರಾರಂಭ ವಾಯಿತು. ಧ್ಯಾನ ಕೇಂದ್ರದ ಸಂಚಾಲಕರಾದ ಬಿ ಕೆ ಯಶೋದಾ ಹಾಗು ಬಿ ಕೆ ಮನೋಹರ್ ಶಿಬಿರದ ಇತರ ಶಿಕ್ಷಕ ವೃಂದ ಹಾಗು ಆಗಮಿಸಿದ ಮಕ್ಕಳ ಪೋಷಕರೊಂದಿಗೆ ದೀಪ ಪ್ರಜ್ವಲನೆ ಮಾಡಿ ಶಿಬಿರ ವನ್ನು ಉದ್ಘಾಟಿಸಿದರು.

ಬಿ ಕೆ ಮನೋಹರ್ ಶಿಬಿರದ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿ ದರು 5 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಮಕ್ಕಳ ಸರ್ವೋತೋಮುಖ ಬೆಳೆವಣಿಗೆಗೆ ಪೂರಕ ವಾಗುವಂತಹ ಅನೇಕ ರಚನಾತ್ಮಕ ಹಾಗು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
