ಅಪೋಲೋ ಹಾಸ್ಪಿಟಲ್ಸ್ ನಿಂದ ಬೆಂಗಳೂರಿನಲ್ಲಿ `ಸೀನಿಯರ್ಸ್ ಫರ್ಸ್ಟ್’ ವಿಸ್ತರಣೆ ಮೂಲಕ ವೃದ್ಧರ ಸಮಗ್ರ ಆರೈಕೆಗೆ ಶಕ್ತಿ

0
10

ಬೆಂಗಳೂರು : ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಇಂದು ಹಿರಿಯ ನಾಗರಿಕರಿಗೆ ವಿಶೇಷವಾಗಿ ರೂಪಿಸಲಾದ ಸಮಗ್ರ ಜೀರಿಯಾಟ್ರಿಕ್ ಕೇರ್ ಕಾರ್ಯಕ್ರಮ ಅಪೋಲೋ ಸೀನಿಯರ್ಸ್ ಫರ್ಸ್ಟ್ ವಿಸ್ತರಣೆಯನ್ನು ಪ್ರಕಟಿಸಿದ್ದು ಇದು ಭಾರತದಲ್ಲಿ ಹೆಚ್ಚು ರಚನಾತ್ಮಕ ಮತ್ತು ಸಹಯೋಗದ ವೃದ್ಧರ ಆರೈಕೆಯತ್ತ ಗಮನಾರ್ಹ ಹೆಜ್ಜೆಯಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಮೊದಲಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮವು ಈಗ ಜಯನಗರ, ಶೇಷಾದ್ರಿಪುರಂ ಮತ್ತು ಸರ್ಜಾಪುರ ರಸ್ತೆಯ ಅಪೋಲೋ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಲಿದ್ದು ನಗರದಾದ್ಯಂತ ತನ್ನ ಏಕೀಕೃತ ಹಿರಿಯರ ಆರೈಕೆಯ ಲಭ್ಯತೆಯನ್ನು ವಿಸ್ತರಿಸುತ್ತಿದೆ.

ಈ ಪ್ರಾರಂಭವು ಬನ್ನೇರುಘಟ್ಟದಲ್ಲಿ ಕಾರ್ಯಕ್ರಮದ ಒಂದನೇ ವರ್ಷಾಚರಣೆಯೂ ಆಗಿದ್ದು ಅದರಲ್ಲಿ ಹಿರಿಯರ ಆರೋಗ್ಯಸೇವೆಗೆ ಹೆಚ್ಚು ಸತತ ಮತ್ತು ರೋಗಿ-ಕೇಂದ್ರಿತ ವಿಧಾನ ರೂಪಿಸಲು ನೆರವಾಗಿದ್ದು ಇದು ಕಂತು ಕಂತಿನ ಚಿಕಿತ್ಸೆಯಿಂದ ದೀರ್ಘಾವಧಿ ಆರೋಗ್ಯ ನಿರ್ವಹಣೆ ಮತ್ತು ಪುನಶ್ಚೇತನದ ಬೆಂಬಲದತ್ತ ಮುನ್ನಡೆಯುತ್ತದೆ.

ಭಾರತದ ವೃದ್ಧರ ಜನಸಂಖ್ಯೆಯು ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಸಮಯದಲ್ಲಿ ಆರೋಗ್ಯಸೇವಾ ವ್ಯವಸ್ಥೆಗಳು ಹಿರಿಯರ ಸಂಕೀರ್ಣ ಮತ್ತು ವಿಕಾಸಗೊಳ್ಳುತ್ತಿರುವ ಅಗತ್ಯಗಳ ಸವಾಲುಗಳನ್ನು ಎದುರಿಸುವುದನ್ನು ಮುಂದುವರಿಸಿವೆ. ಬಹಳಷ್ಟು ಹಿರಿಯರು ಹಲವು ಗಂಭೀರ ಸಮಸ್ಯೆಗಳೊದಿಗೆ ಜೀವಿಸುತ್ತಿದ್ದು ಅದಕ್ಕೆ ಪದೇ ಪದೇ ಆಸ್ಪತ್ರೆ ಭೇಟಿ ಮತ್ತು ಆಸ್ಪತ್ರೆ, ಮನೆ ಮತ್ತು ಫಾಲೋ-ಅಪ್ ಚಿಕಿತ್ಸೆಯ ನಡುವೆ ಸಹಕಾರದ ಕೊರತೆಯ ವಿಘಟಿತ ವ್ಯವಸ್ಥೆಗಳ ಮೇಲೆ ಆಧಾರಪಟ್ಟಿವೆ. ಈ ಅಂತರವು ಚಿಕಿತ್ಸೆಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಲ್ಲದೆ ಆರೈಕೆ ಮಾಡುವವರು ಮತ್ತು ಕುಟುಂಬಗಳಿಗೆ ಗಮನಾರ್ಹ ಹೊರೆಯಾಗುತ್ತದೆ.

ಈ ಹಿನ್ನೆಲೆಯಲ್ಲಿ ಸೀನಿಯರ್ಸ್ ಫರ್ಸ್ಟ್ ಅನ್ನು ರಚನಾತ್ಮಕ, ಬಹು ಶಿಸ್ತೀಯ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾಗಿದ್ದು ಇದು ರೋಗತಡೆಯ ಆರೈಕೆ, ಕ್ರಿಯಾತ್ಮಕ ಸ್ವಾಸ್ಥ್ಯ ಮತ್ತು ಚಿಕಿತ್ಸೆಯ ನಂತರ ಚೇತರಿಕೆಯನ್ನು ಏಕ, ಸಂಪರ್ಕಿತ ವ್ಯವಸ್ಥೆಯಾಗಿ ತಂದಿದೆ. ಅಪೋಲೋದ ನಾಲ್ಕು ದಶಕಗಳ ಕ್ಲಿನಿಕಲ್ ಅನುಭವ ಆಧರಿಸಿ ನಿರ್ಮಿಸಲಾದ ಈ ಕಾರ್ಯಕ್ರಮವು ಬಹುಶಿಸ್ತೀಯ ವೈದ್ಯಕೀಯ ತಂಡಗಳು, ವೈಯಕ್ತಿಕಗೊಳಿಸಿದ ಆರೋಗ್ಯ ಯೋಜನೆಗಳು, ಸತತ ಮೇಲ್ವಿಚಾರಣೆ ಮತ್ತು ತಡೆರಹಿತ ಆಸ್ಪತ್ರೆಯಿಂದ ಮನೆಗೆ ಬದಲಾವಣೆಗಳ ಮೂಲಕ ಹಿರಿಯರಿಗೆ ಅವರ ಆರೋಗ್ಯಸೇವೆಯ ಪ್ರಯಾಣದ ಪ್ರತಿಯೊಂದಹ ಹಂತದಲ್ಲಿಯೂ ಬೆಂಬಲಿಸುತ್ತದೆ.

ಈ ಚಿಕಿತ್ಸೆಯ ದೃಷ್ಟಿಕೋನಕ್ಕೆ ಪೂರಕವಾಗಿ ಜಿರಿಯಾಟ್ರಿಕ್ ಸ್ಪೆಷಲಿಸ್ಟ್ ಡಾ. ಸ್ಟೀವ್ ಪಾಲ್, “ವೃದ್ಧಾಪ್ಯದ ಆರೈಕೆಯು ಪ್ರತಿಕ್ರಿಯಾತ್ಮಕಕ್ಕಿಂತ ಕ್ರಿಯಾತ್ಮಕ ಮತ್ತು ರೋಗತಡೆಯ ಆರೋಗ್ಯ ನಿರ್ವಹಣೆಯತ್ತ ಬದಲಾವಣೆ ಅಗತ್ಯವಾಗಿದೆ. ಸೀನಿಯರ್ಸ್ ಫರ್ಸ್ಟ್ ಅನ್ನು ರಿಸ್ಕ್ ಗಳನ್ನು ನಿರೀಕ್ಷಿಸುವ, ಸಂಕೀರ್ಣತೆಗಳನ್ನು ಕಡಿಮೆ ಮಾಡುವ ಮತ್ತು ರಚನಾತ್ಕ ಪುನಶ್ಚೇತನ ಮಾರ್ಗಗಳನ್ನು ಒದಗಿಸುವ, ರೋಗಿಗಳಿಗೆ ಸ್ವತಂತ್ರ ಮತ್ತು ದೀರ್ಘಕಾಲ ಜೀವನದ ಗುಣಮಟ್ಟ ನೀಡಲು ನೆರವಾಗಲು ವಿನ್ಯಾಸಗೊಳಿಸಲಾಗಿದೆ” ಎಂದರು.

ಈ ವಿಸ್ತರಣೆ ಕುರಿತು ಅಪೋಲೋ ಹಾಸ್ಪಿಟಲ್ಸ್ ಕರ್ನಾಟಕ ಪ್ರದೇಶದ ಸಿಇಒ ಅಕ್ಷಯ್ ಓಲೇಟಿ, “ಸೀನಿಯರ್ಸ್ ಫರ್ಸ್ಟ್ ಮೂಲಕ ನಾವು ಹಿರಿಯ ನಾಗರಿಕರಿಗೆ ಆರೈಕೆ ನೀಡಲಾಗುತ್ತದೆ ಎನ್ನುವುದನ್ನು ಮರು ರೂಪಿಸುತ್ತಿದ್ದೇವೆ. ಆರೈಕೆಯು ಆಸ್ಪತ್ರೆಯಿಂದ ಬಿಡುಗಡೆಯಲ್ಲಿ ಕೊನೆಗೊಳ್ಳಬಾರದು ಬದಲಿಗೆ ಅದು ಪುನಶ್ಚೇತನ ಮತ್ತು ದೀರ್ಘಾವಧಿ ಸ್ವಾಸ್ಥ್ಯದೊಂದಿಗೆ ಮುಂದುವರಿಯಬೇಕು ಎನ್ನುವುದಾಗಿದೆ. ಈ ಏಕೀಕೃತ ವಿಧಾನವು ಉತ್ತಮ ಆರೋಗ್ಯ ಫಲಿತಾಂಶಗಳನ್ನು ನೀಡುವುದಲ್ಲದೆ ಕುಟುಂಬಗಳು ಮತ್ತು ಆರೈಕೆ ಮಾಡುವವರಿಗೂ ಬೆಂಬಲಿಸುತ್ತದೆ” ಎಂದರು.

ಈ ಕಾರ್ಯಕ್ರಮವು ರೋಗತಡೆಯ ಆರೋಗ್ಯ ಮೌಲ್ಯಮಾಪನಗಳು ಮತ್ತು ಗಂಭೀರ ರೋಗ ನಿರ್ವಹಣೆಗೆ ಮತ್ತು ಪ್ರಮುಖ ಚಿಕಿತ್ಸೆಗಳ ನಂತರ ಪುನರ್ ವಸತಿಗೆ ವೈಯಕ್ತಿಕಗೊಳಿಸಿದ ವೆಲ್ನೆಸ್ ಪ್ಲಾನ್ ಗಳ ಸಮಗ್ರ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಮೊಣಕಾಲು ಮತ್ತು ಮಂಡಿಯಂತಹ ಬದಲಾವಣೆಗಳಂತಹ ಆರ್ಥೊಪಿಡಿಕ್ ಶಸ್ತ್ರಚಿಕಿತ್ಸೆ, ಬೈಪಾಸ್ ಸರ್ಜರಿ ಮತ್ತು ಆಂಜಿಯೊಪ್ಲಾಸ್ಟಿಯಂತಹ ಹೃದಯ ಸಂಬಂಧಿ ಚಿಕಿತ್ಸೆಗಳು, ಪಾರ್ಶ್ವವಾಯು ಮತ್ತು ಪಾರ್ಕಿನ್ಸನ್ಸ್ ರೋಗದಂತಹ ನರಸಂಬಂಧಿ ಸಮಸ್ಯೆಗಳು ಮತ್ತು ಕಿಮೋಥೆರಪಿಯಂತಹ ಆಂಕಾಲಜಿ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಯ ಚೇತರಿಕೆ ಒಳಗೊಂಡಿದ್ದು ಇದು ವೈಯಕ್ತಿಕ ಆರೋಗ್ಯದ ಸ್ಥಿತಿಗತಿ ಮತ್ತು ದೌರ್ಬಲ್ಯ ಆಧರಿಸಿ ರಚನಾತ್ಮಕ ಆರೈಕೆಯ ಮಾರ್ಗಗಳನ್ನು ರೂಪಿಸಲಾಗುತ್ತದೆ.

ಸೀನಿಯರ್ಸ್ ಫರ್ಸ್ಟ್ ನ ಪ್ರಮುಖ ಶಕ್ತಿ ಇರುವುದು ಆಸ್ಪತ್ರೆಯ ವ್ಯವಸ್ಥೆಯ ಆಚೆಗೂ ಸಹಕಾರದ ಆರೈಕೆ ನೀಡುವುದು. ಈ ಕಾರ್ಯಕ್ರಮವು ಅಪೋಲೋದ ವಿಸ್ತಾರ ಆರೋಗ್ಯ ವ್ಯವಸ್ಥೆಯನ್ನು ಒಟ್ಟಿಗೆ ತರುತ್ತಿದ್ದು ಅದರಲ್ಲಿ ಆಸ್ಪತ್ರೆ ಸೇವೆಗಳು, ಗೃಹ ಆರೋಗ್ಯಸೇವೆ, ರೋಗನಿರ್ಣಯ, ಫಾರ್ಮಸಿ ಸಪೋರ್ಟ್ ಮತ್ತು ಡಿಜಿಟಲ್ ಹೆಲ್ತ್ ಪ್ಲಾಟ್ ಫಾರಂಗಳು ಒಳಗೊಂಡಿದ್ದು ಪ್ರತಿ ಹಂತದ ಚಿಕಿತ್ಸೆ ಮತ್ತು ಚೇತರಿಕೆಯಲ್ಲೂ ಆರೈಕೆಯ ಮುಂದುವರಿಕೆ ನೀಡುತ್ತದೆ. ಹಿರಿಯರು ಮತ್ತು ಅವರ ಆರೈಕೆ ಮಾಡುವವರಿಗೆ ವಿಶೇಷ ಹೆಲ್ಪ್ ಲೈನ್ ಗಳು, ಸಹಾಯಕ ಸೇವೆಗಳು, ಸಲಹೆಗಳು ಮತ್ತು ಪ್ರವೇಶಗಳಿಗೆ ಆದ್ಯತೆಯ ಲಭ್ಯತೆ, ದಿನಪೂರ್ತಿ ವೈದ್ಯಕೀಯ ಮಾರ್ಗದರ್ಶನ ಮತ್ತು ತುರ್ತು ಸಹಕಾರವಿದ್ದು ಆರೈಕೆಯನ್ನು ಹೆಚ್ಚು ಲಭ್ಯ, ಪ್ರತಿಕ್ರಿಯಾತ್ಮಕ ಮತ್ತು ತಡೆರಹಿತವಾಗಿಸುತ್ತದೆ.

ವೃದ್ಧರ ಆರೈಕೆಯಲ್ಲಿ ದೀರ್ಘಕಾಲದಿಂದ ಉಳಿದ ಅಂತರಗಳನ್ನು ಮುಖ್ಯವಾಗಿ ಏಕೀಕರಣ, ಸೀಮಿತ ಗೃಹ ಆಧರಿತ ಬೆಂಬಲ ಮತ್ತು ರಚನಾತ್ಮಕ ಚೇತರಿಕೆಯ ಕಾರ್ಯಕ್ರಮಗಳ ಕೊರತೆಯನ್ನು ನಿವಾರಿಸಲು ಅಪೋಲೋ ಸೀನಿಯರ್ಸ್ ಫರ್ಸ್ಟ್ ಭಾರತದಲ್ಲಿ ಹಿರಿಯರ ಆರೈಕೆಯ ನೀಡಿಕೆಯಲ್ಲಿ ಹೊಸ ಮಾನದಂಡ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ತನ್ನ ವಿಸ್ತರಣೆಯ ಮೂಲಕ ಅಪೋಲೋ ಹಾಸ್ಪಿಟಲ್ಸ್ ಹಿರಿಯರಿಗೆ ಘನತೆ, ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ತರಲು ತನ್ನ ಬದ್ಧತೆಯನ್ನು ಮರು ದೃಢೀಕರಿಸಿದೆ.

LEAVE A REPLY

Please enter your comment!
Please enter your name here