ಚಿತ್ರನಟ ಹಾಗೂ ನಿರ್ಮಾಪಕ ಅಲೋಕ್ ದುರ್ಗಾ ಪ್ರಸಾದ್ ಗೆ ಕರಾವಳಿ ಜಾನಪದ ರತ್ನ ಪ್ರಶಸ್ತಿ ಪ್ರಧಾನ !

0
30

ಬೆಂಗಳೂರು : ವೈಟ್ ಲೋಟಸ್ ಫೌಂಡೇಶನ್ ಟ್ರಸ್ಟ್ ಬಂಟ್ವಾಳ ಹಾಗೂ ಕರ್ನಾಟಕ ಜಾನಪದ ಪರಿಷತ್ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಕರಾವಳಿ ಜಾನಪದ ವೈಭವ ಸಮಾರಂಭದಲ್ಲಿ ಚಿತ್ರನಟ ಹಾಗೂ ನಿರ್ಮಾಪಕ ಅಲೋಕ್ ದುರ್ಗಾ ಪ್ರಸಾದ್ ಅವರಿಗೆ ತುಳುನಾಡ ಜಾನಪದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಏಪ್ರಿಲ್ 24 ರಿಂದ 26 ರವರೆಗೆ ಬೆಂಗಳೂರಿನ ಬಸವೇಶ್ವರನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ಹಲವು ಗಣ್ಯರ ಸಮ್ಮುಖದಲ್ಲಿ ತುಳು ಹಾಗೂ ಕನ್ನಡ ಚಲನಚಿತ್ರ ರಂಗದಲ್ಲಿ ಬಹುಬೇಡಿಕೆಯ ಚಿತ್ರನಟನಾಗಿ ಹೊರ ಹೊಮ್ಮುತ್ತಿರುವ ಯುವ ಪ್ರತಿಭೆ,ಚಿತ್ರನಟ ಹಾಗೂ ನಿರ್ಮಾಪಕ ಅಲೋಕ್ ದುರ್ಗಾ ಪ್ರಸಾದ್ ಅವರು ತನ್ನ ಸಿನಿಮಾ ಸೇರಿದಂತೆ ನಾಟಕ ಹಾಗೂ ಮತ್ತಿತರ ಕಲಾ ಪ್ರಕಾರಗಳಲ್ಲಿ ತುಳುನಾಡಿನ ಜಾನಪದ ಕಲೆಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುತ್ತಿರುವ ಕಾರಣ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿರುತ್ತದೆ.

ಕರ್ನಾಟಕ ಜಾನಪದ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರೂ ,ವೈಟ್ ಲೋಟಸ್ ಫೌಂಡೇಶನ್ ಟ್ರಸ್ಟ್ (ರಿ) ಇದರ ಸಂಚಾಲಕರು ಆಗಿರುವ ಪ್ರಮೀಳಾ ಮಾಣುರು ಇವರ ನೇತೃತ್ವದಲ್ಲಿ ನಡೆದ ಈ ವಿಶೇಷ ಕರಾವಳಿ ಜಾನಪದ ವೈಭವ ಸಮಾರಂಭದಲ್ಲಿ ತುಳುನಾಡಿನ ಜಾನಪದ ಕಲೆಗಳ ಸೊಗಡು, ಸೌಂದರ್ಯಗಳ ಅದ್ದೂರಿ ಮೆರುಗು ವೈಭವಗಳು,ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅನಾವರಣಗೊ೦ಡಿರುವುದು ವಿಶೇಷವೇನಿಸಿದೆ.

ಪ್ರಶಸ್ತಿ ಪುರಸ್ಕೃತ ಚಿತ್ರನಟ ಹಾಗೂ ನಿರ್ಮಾಪಕ ಅಲೋಕ್ ದುರ್ಗಾ ಪ್ರಸಾದ್ ಅವರು ತನ್ನದೇ ನಿರ್ದೇಶನದಲ್ಲಿ ಸದ್ಯದಲ್ಲೇ ಕನ್ನಡ ಹಾಗೂ ತುಳು ಚಲನಚಿತ್ರ ನಿರ್ಮಾಣಕ್ಕೆ ತಯಾರಿ ನಡೆಸುತ್ತಿದ್ದು ಈ ಕುರಿತ ಕೆಲಸ ಕಾರ್ಯಗಳು ನಡೆಯುತ್ತಿವೆ. ಅದೇ ರೀತಿ ಇದಾದ ಬಳಿಕ ಮುಂದಿನ ದಿನಗಳಲ್ಲಿ ಇವರ ಸಹ ನಿರ್ದೇಶನ ಹಾಗೂ ಮುಖ್ಯ ಪಾತ್ರ ನಟನೆಯ ಆನಂದ್ ಎರ್ಮಾಳ್ ನಿರ್ದೇಶನದ ಉಪನ್ಯಾಸಕ, ಸಾಹಿತಿ,ಸಂಶೋಧಕ ಬಿ.ಎ ಲೋಕಯ್ಯ ಶಿಶಿಲರ ಕಥೆ, ಸಾಹಿತ್ಯ,ಸಂಭಾಷಣೆ ಇರುವ ಎರಡು ತುಳು ಸಿನಿಮಾಗಳು ಕೂಡ ತಯಾರಾಗಲಿವೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here