ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ನರೇಂದ್ರ ಮೋದಿ ನಾಯಕತ್ವ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿ ಆಡಳಿತ ಚುಕ್ಕಾಣಿಯಲ್ಲಿ ಬಿಜೆಪಿ : ಪಾಲೇದು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

0
32

ತಣ್ಣೀರುಪoತ : ಮೇ 04 ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ದಿಗ್ವಿಜಯ ಸಾಧಿಸಿ,ಬಿಜೆಪಿ ಆಡಳಿತ ಚುಕ್ಕಾಣಿ ಪಡೆದು ಇತಿಹಾಸ ನಿರ್ಮಾಣ ಮಾಡಿದ ಪ್ರಯುಕ್ತ ತಣ್ಣೀರುಪoತ ಗ್ರಾಮ ಪಾಲೇದು ಕಾರ್ಯಕರ್ತರು ಸಿಡಿಮದ್ದು ಸಿಡಿಸಿ, ಜೈಕಾರ ಘೋಷಣೆ ಮೊಳಗಿಸುವ ಮೂಲಕ, ಸಿಹಿತಿಂಡಿ ಹಂಚಿಕೊಂಡು ಗೆಲುವಿನ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇoಕ್ಯಾರು,ಪ್ರಮುಖರಾದ ಚೇತನ್ ಸುವರ್ಣ ಅಳಕ್ಕೆ, ಅನೀಲ್ ಪಾಲೇದು, ರಾಜೇಶ್ ಕರಂಗೀಲು, ಹರೀಶ್ ಪ್ರಸಾದ್ ಬೋಲ್ಡೆಲ್, ಯತೀಶ್ ಪಾಲೇದು ಇನ್ನೂ ಅನೇಕ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here