ಬನ್ನಡ್ಕದಲ್ಲಿ ಮತ್ತೊಂದು ರಸ್ತೆ ಅಪಘಾತ : ನಿಯಂತ್ರಣ ತಪ್ಪಿ ಬಸ್‌ ಪಲ್ಟಿ : ಬೈಕ್‌ ಸವಾರ ಗಂಭೀರ

0
350

ಬನ್ನಡ್ಕದಲ್ಲಿ ಮತ್ತೊಂದು ರಸ್ತೆ ಅಪಘಾತ : ನಿಯಂತ್ರಣ ತಪ್ಪಿ ಬಸ್‌ ಪಲ್ಟಿ : ಬೈಕ್‌ ಸವಾರ ಗಂಭೀರ

ಮೂಡುಬಿದಿರೆ : ಬನ್ನಡ್ಕದಲ್ಲಿ ಇತ್ತೀಚೆಗಷ್ಟೆ ಅಪಘಾತಗಳು ಹೆಚ್ಚಾಗಿದ್ದು, ಇಂದು ಮತ್ತೊಂದು ಅವಘಡ ಸಂಭವಿಸಿದೆ. ಕಾರ್ಕಳ ಮಾರ್ಗವಾಗಿ ಮೂಡುಬಿದರೆ ಮಂಗಳೂರಿಗೆ ತೆರಳುತ್ತಿದ್ದ ವಿಶಾಲ್‌ ಬಸ್‌ ಚಾಲಕನ ಬೆಜವಬ್ದಾರಿ ಮತ್ತು ಅತಿ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಬನ್ನಡ್ಕ ಸೋನ್ಸ್ ಫಾರ್ಮ್ ಹತ್ತಿರ ಬಸ್‌ ಪಲ್ಟಿಯಾಗಿ ಅಪಘಾತ ನಡೆದಿದೆ.
ಅಪಘಾತ ನಡೆದ ಸ್ಥಳದಲ್ಲಿ ಬೈಕ್‌ ಸವಾರ ಜೀತೇಶ್‌ ಮೂಡುಮಾರ್ನಾಡು ಎಂಬವರಿಗೆ ತೀವ್ರ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿದ್ದರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here