ಜೆಸಿಐ ಪರ್ಕಳ ವತಿಯಿಂದ ಮೇ 16ರಂದು ರಕ್ತದಾನ ಶಿಬಿರ

0
18

ಪರ್ಕಳ: ಜೆಸಿಐ ಪರ್ಕಳ ಘಟಕದ ವತಿಯಿಂದ ಮಾನವೀಯ ಸೇವೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

ಈ ರಕ್ತದಾನ ಶಿಬಿರವು ಮೇ 16, 2026ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಣಿಪಾಲದ ಕೆ.ಎಂ.ಸಿ ರಕ್ತ ನಿಧಿಯಲ್ಲಿ ನಡೆಯಲಿದೆ.

“ರಕ್ತದಾನ ಮಾಡಿ, ಜೀವ ಉಳಿಸಿ” ಎಂಬ ಸಂದೇಶದೊಂದಿಗೆ ನಡೆಯುವ ಈ ಶಿಬಿರದಲ್ಲಿ ಸಾರ್ವಜನಿಕರು, ಯುವಕರು ಹಾಗೂ ಸಮಾಜಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಜೆಸಿಐ ಪರ್ಕಳ ಮನವಿ ಮಾಡಿದೆ.

ರಕ್ತದಾನವು ಅನೇಕ ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.

LEAVE A REPLY

Please enter your comment!
Please enter your name here