ಮೇ 15ರಿಂದ 31ರವರೆಗೆ ಮಲ್ಪೆಯಲ್ಲಿ ಅಧಿಕ ಜ್ಯೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆ

0
39

ಉಡುಪಿ: ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ ಆಶ್ರಯದಲ್ಲಿ ಮಲ್ಪೆಯ ಕಡಲತೀರದ ಶ್ರೀ ಆನಂದ ಶರಧಿ ನೂತನ ನಿವೇಶನದಲ್ಲಿ ಮೇ 15 ರಿಂದ ಮೇ 31 ರವರೆಗೆ ಅಧಿಕ ಜ್ಯೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆ ಹಾಗೂ ವೈವಿಧ್ಯಮಯ ಧಾರ್ಮಿಕ, ಕ್ರೀಡಾ ಮತ್ತು ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಟನಾ ಕಾರ್ಯದರ್ಶಿ ಗೋವಿಂದರಾಜ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

15ರಂದು ಸಾಯಂಕಾಲ 4 ಗಂಟೆಗೆ ಕೃಷಿ ಮೇಳವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮತ್ತು ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಶಾಸಕ ಯಶ್​ಪಾಲ್​ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮೊದಲಾದವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗುಡಿ ಕೈಗಾರಿಕೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಲಾಗುವುದು ಎಂದರು.

18 ರಂದು ಮಧ್ಯಾಹ್ನ 3.30ರಂದು ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ಮಲ್ಪೆ ಕಡಲತೀರದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ತದನಂತರ ಭಜನಾ ಸ್ಪರ್ಧೆ ಉದ್ಘಾಟನೆ ನೆರವೇರಲಿದೆ. ಮೇ 24ರಂದು ಬೆಳಿಗ್ಗೆ 7ಕ್ಕೆ ಗ್ರಾಮೀಣ ಕ್ರೀಡಾ ಸ್ಪರ್ಧೆ ನಡೆಯಲಿದೆ. 31ರಂದು ಬೆಳಿಗ್ಗೆ 10ಕ್ಕೆ ಮಾತೃವಂದನಾ ಕಾರ್ಯಕ್ರಮ ಜರಗಲಿದ್ದು, ಲೇಖಕಿ ಆರತಿ ಬಿ.ವಿ. ಉಪನ್ಯಾಸ ನೀಡಲಿದ್ದಾರೆ. ಸಾಯಂಕಾಲ 4ಗಂಟೆಗೆ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್​, ಪ್ರೀತಂ ಭಟ್​, ಮಂಜು ಕೊಳ ಮಲ್ಪೆ, ಮಹಿಳಾ ಸಂಚಾಲಕಿ ತಾರಾ ಯು. ಆಚಾರ್ಯ, ಸುಮಿತ್ರಾ ಕೆರೆಮಠ, ಕಮಲಾವತಿ, ಸಂತೋಷ್​ ಉದ್ಯಾವರ, ಚಂದ್ರಕಾತ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here