ಆಧುನಿಕ ಮನೆಗಳಿಗೆ ಹೊಂದುವ ಸೂಕ್ತ ಉತ್ಪನ್ನ: ಎನ್.ಎಸ್. ಸತೀಶ್

0
12

ಮಂಗಳೂರಿನ ಬಿಸಿಯನ್ನು ಹೊಡೆದೋಡಿಸಲು ಎಐ ಅಟ್‌ಮಾಕ್ಸ್ ತಂತ್ರಜ್ಞಾನ ಹೊಂದಿರುವ ಸ್ಪಾರ್ಟನ್ ಎಐ ಟವರ್ ಏಸಿ ಬಿಡುಗಡೆ ಮಾಡಿದ ಹೈಯರ್ ಇಂಡಿಯಾ

ಮಂಗಳೂರು : ಸತತ 17 ವರ್ಷಗಳಿಂದ ವಿಶ್ವದ ನಂ.1 ಗೃಹೋಪಯೋಗಿ ಉಪಕರಣಗಳ ಬ್ರಾಂಡ್ ಆಗಿ ಹೊರಹೊಮ್ಮಿರುವ ಹೈಯರ್ ಅಪ್ಲೈಯನ್ಸ್ ಇಂಡಿಯಾ ಸಂಸ್ಥೆಯು ಇದೀಗ ಎಐ ಅಟ್‌ಮಾಕ್ಸ್ ತಂತ್ರಜ್ಞಾನ ಹೊಂದಿರುವ ಸ್ಪಾರ್ಟನ್ ಎಐ ಟವರ್ ಏರ್ ಕಂಡೀಷನರ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಂಗಳೂರಿನ ಬಿರುಬೇಸಿಗೆಯನ್ನು ಕಳೆಯಲು ಹೊಸತಾದ, ಸೊಗಸಾದ ಉತ್ಪನ್ನ ಒದಗಿಸಿದೆ.

ಈ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿರುವ ಹೈಯರ್ ಅಪ್ಲೈಯನ್ಸ್ ಇಂಡಿಯಾದ ಸಿಇಓ ಎನ್.ಎಸ್. ಸತೀಶ್ ಅವರು ಮಾತನಾಡಿ, “ಸ್ಪಾರ್ಟನ್ ಎಐ ಟವರ್ ಏರ್ ಕಂಡೀಷನರ್ ಭಾರತದಂತಹ ವೈವಿಧ್ಯಮಯ ಮಾರುಕಟ್ಟೆಯಲ್ಲಿ ಏಸಿಗಳ ವ್ಯಾಖ್ಯಾನವನ್ನೇ ಬದಲಿಸುವ ಉದ್ದೇಶ ಹೊಂದಿದೆ. ಅದರಲ್ಲೂ ಮಂಗಳೂರಿನಂತಹ ಹೆಚ್ಚು ಶಾಖದ ಊರಿನಲ್ಲಿ ಹೆಚ್ಚು ಸೌಕರ್ಯ ಒದಗಿಸಲಿದೆ.

ಇದು ಕೇವಲ ಒಂದು ಜಾಗವನ್ನು ತಂಪಾಗಿಸುವುದಲ್ಲ; ಆಧುನಿಕ ಮನೆಗಳ ಅಗತ್ಯಕ್ಕೆ ತಕ್ಕಂತೆ ಬುದ್ಧಿವಂತ ಮತ್ತು ಉನ್ನತ ಅನುಭವವನ್ನು ನೀಡಲಿದೆ. ಪ್ರಿಡಿಕ್ಟಿವ್ ಎಐನಿಂದ ಹಿಡಿದು ಸೆಲ್ಫ್-ಕ್ಲೀನಿಂಗ್ ಸಿಸ್ಟಮ್‌ ಗಳವರೆಗೆ ಇದರಲ್ಲಿರುವ ಪ್ರತಿಯೊಂದು ಆಧುನಿಕ ಜೀವನವನ್ನು ಸರಳಗೊಳಿಸಲು ಮತ್ತು ವಿನ್ಯಾಸದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ವಿನ್ಯಾಸಗೊಳಿಸಲಾಗಿದೆ,” ಎಂದು ತಿಳಿಸಿದರು.

ಸ್ಪಾರ್ಟನ್ ಎಐ ಟವರ್ ಏಸಿಯು ಎಐ ಕ್ಲೈಮೇಟ್ ಕಂಟ್ರೋಲ್ 2.0 ನಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಫೀಚರ್ ಬಳಕೆದಾರರ ಬಳಕೆಯ ವಿಧಾನವನ್ನು ಅರಿತು ವೈಯಕ್ತೀಕರಿಸಿದ ತಂಪು ವಾತಾವರಣ ಒದಗಿಸುತ್ತದೆ. ಇನ್ನು ಎಐ ಪ್ರೀ ಕೂಲಿಂಗ್ ವೈಶಿಷ್ಟ್ಯವು, ಬಳಕೆದಾರರು ಮನೆಗೆ ಬರುವ ಮೊದಲೇ (1 ಕಿ.ಮೀ ಜಿಯೋಫೆನ್ಸ್ ವ್ಯಾಪ್ತಿಯಲ್ಲಿ) ರೂಮ್ ಅನ್ನು ತಂಪಾಗಿಸಲು ಅನುವು ಮಾಡಿಕೊಡುತ್ತದೆ.

ಇದರಲ್ಲಿ ಎಐ ಓಡಿಯು ಸೈಕ್ಲೋನ್ ಕ್ಲೀನ್ ತಂತ್ರಜ್ಞಾನವಿದ್ದು, ಇದು ಹೊರಗಿನ ಘಟಕವನ್ನು ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುತ್ತದೆ. ಒಳಾಂಗಣ ಘಟಕಕ್ಕಾಗಿ ಎಐ ಫ್ರಾಸ್ಟ್ ಸೆಲ್ಫ್-ಕ್ಲೀನ್ ವೈಶಿಷ್ಟ್ಯವಿದ್ದು, ಇದು ಏಸಿಯ ದಕ್ಷತೆಯನ್ನು ಕಾಪಾಡುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಸ್ಪಾರ್ಟನ್ ಎಐ ಟವರ್ ಅನ್ನು ಕೇವಲ ಒಂದು ಏಸಿಯನ್ನಾಗಿ ಮಾಡದೆ, ಆಧುನಿಕ ಭಾರತೀಯ ಮನೆಗಳಿಗೆ ಒದಗುವ ಸಂಪೂರ್ಣ ಕೂಲಿಂಗ್ ಉತ್ಪನ್ನವನ್ನಾಗಿ ರೂಪಿಸಿವೆ.

ಹೈಯರ್ ಸ್ಪಾರ್ಟನ್ ಎಐ ಟವರ್ ಏರ್ ಕಂಡೀಷನರ್‌ಗಳ ಬೆಲೆ ರೂ. 99,000 ರಿಂದ ಪ್ರಾರಂಭವಾಗಲಿದ್ದು, ಪ್ರಮುಖ ಆನ್‌ ಲೈನ್ ಮತ್ತು ಮಂಗಳೂರಿನ ಆಫ್‌ ಲೈನ್ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಖರೀದಿಯ ಸಮಯದಲ್ಲಿ ಗ್ರಾಹಕರು 20% ವರೆಗೆ ತತ್‌ಕ್ಷಣದ ಕ್ಯಾಶ್‌ಬ್ಯಾಕ್ ಮತ್ತು ರೂ. 1,994 ರಿಂದ ಪ್ರಾರಂಭವಾಗುವ ಇಎಂಐ ಆಯ್ಕೆಯನ್ನು ಪಡೆಯಬಹುದು.

LEAVE A REPLY

Please enter your comment!
Please enter your name here