ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮಗಳಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಜಖಂ

0
103

ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮಗಳಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಜಖಂಗೊಂಡಿದ್ದು, ಎಂಟಕ್ಕೂ ಅಧಿಕ ಮರಗಳು ಧರೆಗುರುಳಿವೆ.

ಮಾಂಟ್ರಾಡಿ ಗ್ರಾಮದ ಕೊಟ್ಟಿಬೆಟ್ಟು ನಿವಾಸಿ ವಿಜಯ ಎಂಬುವವರ ಮನೆಯ ಮೇಲ್ಛಾವಣಿಯ ಶೀಟ್ ಗಾಳಿಗೆ ಹಾರಿಹೋಗಿದ್ದು, ಮನೆಯ ಭಾಗಶಃ ಹಾನಿಯಾಗಿದೆ. ನೆಲ್ಲಿಕಾರು ಗ್ರಾಮದ ಅನ್ನು ಕೊರಗ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆ ಹಾಗೂ ಶೌಚಾಲಯ ಜಖಂಗೊಂಡಿದೆ.

ಬೋರುಗುಡ್ಡೆ ಬಳಿಯ ಪಿಡಬ್ಲ್ಯೂಡಿ ರಸ್ತೆಗೆ ಬೃಹತ್ ಬೋಗಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಚಾಯಿತಿ ಕಚೇರಿ ಬಳಿಯ ನೆಡು ತೋಪು ಏಳು ಅಕೇಶಿಯ ಮರಗಳು ಬುಡಮೇಲಾಗಿವೆ

LEAVE A REPLY

Please enter your comment!
Please enter your name here