ಉಭಯ ಶ್ರೀಪಾದರ ಸಾನ್ನಿಧ್ಯದಲ್ಲಿ ಮಲ್ಪೆ ಕಡಲತೀರದಲ್ಲಿ ಭಜನಾ ಮಹೋತ್ಸವ

0
7

ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಮಲ್ಪೆ ಕಡಲಕಿನಾರೆಯ ಆನಂದ ಶರಧಿಯಲ್ಲಿ ಭಜನಾ ಸ್ಪರ್ಧೆಯನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಸಿ ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಯಶಪಾಲ್ ಎ.ಸುವರ್ಣ ,ಕಟೀಲು ದೇವಸ್ಥಾನದ ಅರ್ಚಕರದ ಹರಿನಾರಾಯಣದಾಸ ಅಸ್ರಣ್ಣ ,ನಿಕಟಪೂರ್ವ ಶಾಸಕರಾದ ಕೆ.ರಘುಪತಿ ಭಟ್, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಜಿ.ಎಸ್ ಚಂದ್ರಶೇಖರ್,ಉಜ್ವಲ್ ಡೆವಲಪರ್ಸ್ ಇದರ ಮಾಲಕರಾದ ಪುರುಷೋತ್ತಮ ಶೆಟ್ಟಿ, ಉದ್ಯಮಿಗಳಾದ ಸಾಧು ಸಾಲಿಯಾನ್,ಕೊರಗ ಸಮಾಜದ ಅಧ್ಯಕ್ಷರಾದ ಗಣೇಶ್ ಬಾರ್ಕೂರು, ಆರ್ ಎಸ್ ಎಸ್ ಮಂಗಳೂರು ವಿಭಾಗದ ಕಾರ್ಯವಾಹ ಡಾ.ವಾದಿರಾಜ್, ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರತ್ನಕುಮಾರ್, ಕಲಾಶ್ರೀ ಮಹೋಪಾಧ್ಯಾಯ ಮಧೂರು ಪಿ.ಬಾಲಸುಬ್ರಹ್ಮಣ್ಯ, ಉದ್ಯಮಿಗಳಾದ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭದಲ್ಲಿ ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಆನಂದ ಶರಧಿಯ ತನಕ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಗಣ್ಯರು, ಸಮಿತಿಯ ಸಂಚಾಲಕರು,ಸದಸ್ಯರು,ಹಲವಾರು ಭಜನಾ ತಂಡಗಳ ಸದಸ್ಯರು,ಕುಣಿತ ಭಜನೆಗಳೊಂದಿಗೆ ಶೋಭಾ ಯಾತ್ರೆ ನಡೆಯಿತು.

LEAVE A REPLY

Please enter your comment!
Please enter your name here