ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಸಂಪನ್ನ

0
28

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ವಾರ್ಷಿಕ ಪ್ರತಿಷ್ಠಾ ಬ್ರಹ್ಮ ಕಳಶೋತ್ಸವ 19.5.2026.ಸೋಮವಾರ ವಿಜೃಂಭಣೆಯಿಂದ ನಡೆಯಿತು. ಚಂಡಿಕಾ ಹೋಮ, ಶುದ್ದಿ ಕಲಶಅಭಿಷೇಕ, ಕ್ಷೇತ್ರ ತಂತ್ರಿಗಳಾದ ಹಾರ್ನಾಡ್ ಕೆ. ಯು. ಪದ್ಮನಾಭ ತಂತ್ರಿಗಳ ನೆತ್ರಿತ್ವದಲ್ಲಿ ನಡೆಯಿತು. ಲಲಿತಾ ಸಹಸ್ರನಾಮ ಪಾರಾಯಣ, ಭಜನೆ, ಶ್ರೀ ಮಹಾತಾಯಿಯ ದರ್ಶನ ಸೇವೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು. ಕಾಸರಗೋಡು ಕೋಟೆ ನಾಯಕರ ಕುಟುಂಬಸ್ಥರು, ಊರ ಪರವೂರ ನೂರಾರು ಭಕ್ತ ಬಾಂದವರೀಗೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ (ರಿ.)ಸಮಿತಿ ಅಧ್ಯಕ್ಷರಾದ ನಾಗೇಶ್ ನಾಯಕರು ಆದರದಿಂದ ಶುಭ ಹಾರೈಸಿದರು. ಗೌರವಾಧ್ಯಕ್ಷರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ನೇತೃತ್ವ ನೀಡಿದರು.

LEAVE A REPLY

Please enter your comment!
Please enter your name here