ನೀಲಾವರದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮೃತಿವನ ಉದ್ಘಾಟನೆ ; ಮೇ 25ರಂದು ಭಕ್ತರಿಗೆ ಆಹ್ವಾನ

0
12

ಉಡುಪಿ : ಪದ್ಮವಿಭೂಷಣ, ಯತಿಕುಲಚಕ್ರವರ್ತಿ Vishwesha Tirtha ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥ ನಿರ್ಮಿಸಲಾಗಿರುವ “ಸ್ಮೃತಿವನ” ಉದ್ಘಾಟನಾ ಸಮಾರಂಭವು ಮೇ 25ರಂದು ನೀಲಾವರದಲ್ಲಿ ನಡೆಯಲಿದೆ.

ಶ್ರೀಪಾದರ ಕಂಚಿನ ಪುತ್ಥಳಿಯನ್ನು ಒಳಗೊಂಡ ಸ್ಮೃತಿವನವನ್ನು ಭಕ್ತರಿಗೆ ಸಮರ್ಪಿಸುವ ಕಾರ್ಯಕ್ರಮವು ನೀಲಾವರ ಗೋಶಾಲೆಯ ಮುಂಭಾಗದಲ್ಲಿ ಸೋಮವಾರ ಸಂಜೆ 4.30ಕ್ಕೆ ನಡೆಯಲಿದ್ದು, ಉಡುಪಿಯ ಸಮಸ್ತ ನಾಗರಿಕರು ಹಾಗೂ ಆಸ್ತಿಕ ಮಹನೀಯರಿಗೆ ಆತ್ಮೀಯ ಆಹ್ವಾನ ನೀಡಲಾಗಿದೆ.

ಪೂಜ್ಯ ವಿಶ್ವ ಪ್ರಸನ್ನ ತೀರ್ಥ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಆದೇಶಾನುಸಾರ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಭಕ್ತರು ತಮ್ಮ ಮನೆಮಂದಿ, ಬಂಧು-ಮಿತ್ರರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಈ ಕುರಿತು ಶ್ರೀಪೇಜಾವರ ಮಠದ ದಿವಾನರು ಹಾಗೂ ಅರಣ್ಯ ಇಲಾಖೆ ಉಡುಪಿ ಪ್ರಕಟಣೆ ನೀಡಿದ್ದಾರೆ.

LEAVE A REPLY

Please enter your comment!
Please enter your name here