ಬಡಾಕೆರೆ ಸರಕಾರಿ ಶಾಲೆಯಲ್ಲಿ ನೂತನ ಬಾಲವನ ಉದ್ಘಾಟನೆ ; ಮೇ 24ರಂದು ಕಾರ್ಯಕ್ರಮ

0
11

ಉಡುಪಿ : ಬಡಾಕೆರೆ (ಉತ್ತರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಹಾಗೂ ಅತ್ಯಾಕರ್ಷಕವಾಗಿ ನಿರ್ಮಿಸಲಾದ ಬಾಲವನದ ಉದ್ಘಾಟನಾ ಕಾರ್ಯಕ್ರಮವು ಮೇ 24ರಂದು ನಡೆಯಲಿದೆ.

ಸೇನಾಪುರದ ಶ್ರೀಮತಿ ವಿನಯಾ ಹಾಗೂ ಶ್ರೀ ಮಂಜುನಾಥ ಪೂಜಾರಿ ದಂಪತಿ ಅವರ ಸಹಕಾರದಿಂದ ಶಾಲಾ ಮಕ್ಕಳಿಗಾಗಿ ಸುಂದರ ಬಾಲವನ ನಿರ್ಮಾಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬಡಾಕೆರೆ (ಉತ್ತರ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದ್ದು, ಸಾರ್ವಜನಿಕರು, ಶಾಲಾ ಹಿತೈಷಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here