ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

0
10

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಆಂಗ್ಲ ಭಾಷಾ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ಒಂದು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರವನ್ನು ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜು, ಬಲ್ಮಠ ಇಲ್ಲಿನಆಂಗ್ಲ ಭಾಷಾ ಉಪನ್ಯಾಸಕಿಯಾದ ಸ್ಮಿತಾ ಇವರು ನಡೆಸಿಕೊಟ್ಟರು.

ಪರಿಣಾಮಕಾರಿ ಸಂವಹನ ಹಾಗೂ ಆಂಗ್ಲ ಭಾಷಾ ಬಳಕೆಯಲ್ಲಿ ನಡೆಯುವ ಸಾಮಾನ್ಯ ತಪ್ಪುಗಳ ಗುರುತಿಸುವಿಕೆ, ಈ ಮೊದಲಾದ ವಿಷಯಗಳ ಕುರಿತು ಮಾಹಿತಿಗಳನ್ನು ವ್ಯತ್ಯಸ್ಥ ಅವಧಿಗಳಲ್ಲಿ ತಿಳಿಸಿಕೊಟ್ಟರು.ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲರಾದ ದೇವಿಚರಣ್ ರೈ,ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಆದಿತ್ಯ ಶರ್ಮ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕ ವೃಂದದವರು ಭಾಗವಹಿಸಿದರು.

ಆಂಗ್ಲ ಭಾಷಾ ಉಪನ್ಯಾಸಕಿಯರಾದ ಜಯಶ್ರೀ ಪ್ರಾರ್ಥಿಸಿ, ರಂಜಿನಿ ವಂದಿಸಿದರು. ಉಪನ್ಯಾಸಕಿ ವಿದ್ಯಾ ಪಾರ್ವತಿ ಕಾರ್ಯಕ್ರಮ ಸ್ವಾಗತಿಸಿ,ನಿರೂಪಿಸಿದರು.

LEAVE A REPLY

Please enter your comment!
Please enter your name here