ಬೆಂಗಳೂರು : ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಶುಕ್ರವಾರ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದ್ದು, ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಗಮನಾರ್ಹ ಇಳಿಕೆ ದಾಖಲಾಗಿದೆ.
ಮೇ 22ರ ಶುಕ್ರವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಣನೀಯವಾಗಿ ಕುಸಿದಿದ್ದು, ಚಿನ್ನ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ, ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿ ದರ ಇಂದು ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿದೆ.
ಕಳೆದ ಮೂರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಳಿತ ಕಂಡುಬಂದಿತ್ತು. ಬುಧವಾರ ಮತ್ತು ಗುರುವಾರ ಚಿನ್ನದ ಬೆಲೆ ಏರಿಕೆಯಾದರೆ, ಬೆಳ್ಳಿ ದರ ಕುಸಿತ ಕಂಡಿತ್ತು. ಆದರೆ ಶುಕ್ರವಾರದ ವಹಿವಾಟಿನಲ್ಲಿ ಪರಿಸ್ಥಿತಿ ಬದಲಾಗಿದ್ದು, ಚಿನ್ನದ ಬೆಲೆ ಹಠಾತ್ ಇಳಿಕೆ ಕಂಡಿದೆ.
ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುವ 22 ಕ್ಯಾರೆಟ್ ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ ₹40 ಇಳಿಕೆಯಾಗಿ ₹14,620ಕ್ಕೆ ತಲುಪಿದ್ದು, 10 ಗ್ರಾಂ ಚಿನ್ನದ ದರ ₹400 ಕಡಿಮೆಯಾಗಿ ₹1,46,200 ಆಗಿದೆ.
ಅದೇ ರೀತಿ, 24 ಕ್ಯಾರೆಟ್ ಅಪರಂಜಿ ಚಿನ್ನದ ದರದಲ್ಲೂ ಇಳಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ಮೇಲೆ ₹44 ಹಾಗೂ 10 ಗ್ರಾಂ ಮೇಲೆ ₹440 ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ಇಂದು 1 ಗ್ರಾಂ ಚಿನ್ನದ ಬೆಲೆ ₹15,949 ಹಾಗೂ 10 ಗ್ರಾಂ ಚಿನ್ನದ ಬೆಲೆ ₹1,59,490ಕ್ಕೆ ನಿಗದಿಯಾಗಿದೆ.
ಇನ್ನು 18 ಕ್ಯಾರೆಟ್ ಚಿನ್ನದ ದರವೂ ಇಳಿಮುಖವಾಗಿದ್ದು, 1 ಗ್ರಾಂಗೆ ₹33 ಹಾಗೂ 10 ಗ್ರಾಂಗೆ ₹330 ಇಳಿಕೆಯಾಗಿದೆ. ಇದರೊಂದಿಗೆ 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ದರ ₹11,962 ಹಾಗೂ 10 ಗ್ರಾಂ ಚಿನ್ನದ ದರ ₹1,19,620ಕ್ಕೆ ತಲುಪಿದೆ.
ಚಿನ್ನದ ದರದಲ್ಲಿ ಕಂಡುಬಂದಿರುವ ಈ ಇಳಿಕೆ ಮದುವೆ ಸೀಸನ್ ಮತ್ತು ಹೂಡಿಕೆ ಉದ್ದೇಶದ ಖರೀದಿದಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ತಂದಿದೆ.

