ಮಂಗಳೂರು ಜಪ್ಪಿನಮೊಗರು ವರ‍್ಡ್ನಲ್ಲಿ ಕಳೆದ ವರ್ಷ 4 ಬಾರಿ ಕೃತಕ ನೆರೆ ಬಂದಿದ್ದು, ಸಾರ‍್ವಜನಿಕರಿಗೆ ದೈನಂದಿನ ಚಲನವಲನಕ್ಕೆ ತೊಂದರೆಯಾಗಿರುತ್ತದೆ ಈ ಬಗ್ಗೆ ಸಾರ‍್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ನೇತೃತ್ವದಲ್ಲಿ ವಿಧಾನಸಭಾದ್ಯಕ್ಷರಾದ ಯು.ಟಿ. ಖಾದರ್ ಫರೀದ್, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಶಿಫಾರಸ್ಸು ಪತ್ರದೊಂದಿಗೆ ದ.ಕ. ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಿ ಅಂದಾಜುಪಟ್ಟಿಯನ್ನು ಸಲ್ಲಿಸುವಂತೆ ಇಂಜಿನಿಯರ್ ಗಳಿಗೆ ಸೂಚಿಸಿರುತ್ತಾರೆ.
ನಿಯೋಗದಲ್ಲಿ ಸಮಿತಿಯ ಅಧ್ಯಕ್ಷರಾದ ಜೆ.ನಾಗೇಂದ್ರ ಕುಮಾರ್, ಲ| ಶ್ರೀಧರ್ ರಾಜ್ ಶೆಟ್ಟಿ, ಉದಯ ಕೊಟ್ಟಾರಿ ಬಜಾಲ್, ರ‍್ಬರ‍್ಟ್ ಡಿಸೋಜಾ ಕಡೇಕಾರ್ , ಶಿವಾನಂದ ರಾವ್ ಬಜೆಹಿತ್ಲು, ತಾರಾನಾಥ ಭಂಡಾರಿ ತರ‍್ದೋಲ್ಯ, ಜೆ. ಬಾಲಕೃಷ್ಣ ಶೆಟ್ಟಿ, ದಾಮೋದರ ಕಿರೋಡಿಯನ್ , ಶಾಂತಿ ಶೆಟ್ಟಿ ತಂದೊಳಿಗೆ, ಪ್ರಶಾಂತ್ ಡಿʼಸೋಜಾ, ಭರತ್ ಶೆಟ್ಟಿ, ಪದ್ಮನಾಭ ಎ. ಮರಾಠ ಸಂಘದ ಅಧ್ಯಕ್ಷರಾದ ಮೋಹನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

