ಆಟೋರಿಕ್ಷಾ ಚಾಲಕರ ದ ಕ ಜಿಲ್ಲಾ ಸಮ್ಮೇಳನ

0
18

ಆಟೋರಿಕ್ಷಾ ಚಾಲಕರ ಜಿಲ್ಲಾ ಸಮ್ಮೇಳನ ಮೇ 26 ರಂದು ಮಂಗಳವಾರ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಪರೀಕ್ಷಾ ಚಾಲಕರ ಉತ್ತಮ ಬದುಕಿಗಾಗಿ, ರಾಷ್ಟ್ರಮಟ್ಟದ ಸಂಘಟನೆಗಾಗಿ, ಚಾಲಕರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಸಮ್ಮೇಳನ ನಡೆಯಲಿದೆ. ರಿಕ್ಷಾ ಚಾಲಕರ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ ಬೆಲೆ ಏರಿಕೆಗಳನ್ನು ನಿಯಂತ್ರಿಸಿ ಉತ್ತಮ ಬದುಕಿಗೆ ಅವಕಾಶವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ರಿಕ್ಷಾ ಚಾಲಕರು ಬಳಸುವ ಇಂಧನಕ್ಕೆ ಸಬ್ಸಿಡಿ ನೀಡುವುದರೊಂದಿಗೆ ಎಲ್ಲಾ ರಿಕ್ಷಾ ನಿಲ್ದಾಣಗಳನ್ನು ಉಳಿಸಬೇಕೆಂದು, ಕಾನೂನು ಬಾಹಿರವಾಗಿ ಬಾಡಿಗೆ ಮಾಡುತ್ತಿರುವ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಯನ್ನು ಕೂಡ ನಿಷೇಧಿಸಿ ಬದುಕಿಗೆ ಆಧಾರವನ್ನು ನೀಡಬೇಕೆಂದು ಸರಕಾರದಲ್ಲಿ ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ, ಸಂಚಾಲಕರುಗಳಾದ ಕೆಇ ಮೋಹನ್, ಮೊಹಮ್ಮದ್ ಅನ್ಸಾರ್ ಬಜಾಲ್, ಮುಖಂಡರುಗಳಾದ ಮುಷ್ತಾಕ್ ಅಲಿ, ಶೌಕತ್ ಅಲಿ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here