ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ

0
9

ದಿನಾಂಕ:26-05-2026 ಹಾಗೂ ದಿನಾಂಕ:27-05-2026 ರಂದು  ಸಾರ್ವಜನಿಕ ಉದ್ದಿಮೆ ಸಮಿತಿಯು ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಪ್ರವಾಸವನ್ನು ಮಾಡಲಿದ್ದು, ಈ ಪ್ರವಾಸದ ಸಂದರ್ಭದಲ್ಲಿ ಮಂಗಳೂರಿನ ಮತ್ತು ಉಡುಪಿಯಲ್ಲಿ KUIDFC ಮತ್ತು ಅಮೃತ ಯೋಜನೆಯ  ಒಳಚರಂಡಿ ಯೋಜನೆಗಳ ಕಾಮಗಾರಿಗಳ ಲೋಪ ದೋಷಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಅದರ ಬಗ್ಗೆ ಕ್ರಮ ಕೈಗೊಳ್ಳಲು ಸಮಿತಿ ಭೇಟಿ ನೀಡುತ್ತಿದೆ.

 ಈ ಸಮಿತಿಯ ಅಧ್ಯಕ್ಷರಾದ ಟಿ. ರಘುಮೂರ್ತಿಯವರು ಹಾಗೂ ಸದಸ್ಯರುಗಳಾದ ಐವನ್‌ ಡಿʼಸೋಜಾ, ಜಿ.ಕೆ ವೆಂಕಟಶಿವ ರೆಡ್ಡಿ, ಎಂ. ಕೃಷ್ಣಪ್ಪ, ಡಿ.ಜಿ. ಶಂತಾನಗೌಡ, ಕೆ ಗೋಪಾಲಯ್ಯ, ಎಸ್‌. ಮುನಿರಾಜು, ಪ್ರಕಾಶ್‌ ಕೆ. ಕೊಳಿವಾಡ, ಡಾ| ಕೆ. ಗೊವಿಂದರಾಜು, ಟಿ.ಎನ್.‌ ಜವರಾಯ್‌ಗೌಡ, ಕಿಶೋರ್‌ ಕುಮಾರ್‌ ಪುತ್ತೂರು, ಶ್ರೀ ಹರೀಶ್‌ ಇವರುಗಳು ದಿನಾಂಕ 26-5-2026 ರಂದು ಮಂಗಳೂರಿಗೆ ಆಗಮಿಸುವರು.

 ದಿನಾಂಕ: 27-05-2026ರಂದು ಬೆಳಿಗ್ಗೆ ಉಡುಪಿಗೆ ತೆರಳಿ, ಅಲ್ಲಿಯ ಸ್ಥಳವೀಕ್ಷಣೆ ನಡೆಸಿ, ಮಧ್ಯಾಹ್ನ 1 ಗಂಟೆಗೆ ಓಷನ್ ಪರ್ಲ್ ಹೋಟೆಲ್ಗೆ ಆಗಮಿಸಿ, ಮಂಗಳೂರಿನ ಯುಜಿಡಿಗೆ ಸಂಬಂಧಪಟ್ಟಂತಹ KUIDFCಯಿಂದ ಮಾಹಿತಿಗಳನ್ನು ಪಡೆದು, ಚರ್ಚೆ ನಡೆಸುವರು. ಸದ್ರಿ ಚರ್ಚೆ  ನಡೆಸಿದ ನಂತರ ಮಧ್ಯಾಹ್ನದ ಊಟ ಮುಗಿಸಿ, ಮಂಗಳೂರು ನಗರದ ಸುಮಾರು ಏಳು ಸ್ಥಳಗಳಿಗೆ  ಸುರತ್ಕಲ್‌ ಎಸ್.ಟಿ.ಪಿ-ಖಂಡಿಗೆ, ಇಡ್ಯಾ ವೆಟ್‌ವೆಲ್‌, ಅಡ್ಯಾರ್‌ ಎಸ.ಟಿ.ಪಿ., ಬಿಜೈ ಆನೆಗುಂಡಿ, ಅಳಕೆ, ಕಾವೂರು ಎಸ್.ಟಿ.ಪಿ. ಮುಂತಾದ ಕಡೆಗಳಿಗೆ ಭೇಟಿ ನೀಡಲಿದ್ದು ಅಲ್ಲಿ ಉಂಟಾದ ಲೋಪದೋಷಗಳಿಗೆ ಮತ್ತು ಸಾರ್ವಜನಿಕರಿಗೆ ಉಂಟಾದ ತೊಂದರೆಗಳ ಬಗ್ಗೆ ಸ್ಥಳ ವೀಕ್ಷಣೆ ಮಾಡಿ, ಮಂಗಳೂರಿನ ಮಧ್ಯ ಎಸ್.ಟಿಪಿ. ನಂದಿನಿ ನದಿಯಲ್ಲಿ ಉಂಟಾದ ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಚರ್ಚೆ ನಡೆಸುವರು. ಓಷನ್ ಪರ್ಲ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರದಲ್ಲಿ ಅಪರಾಹ್ನ ಗಂಟೆ  2:00ರಿಂದ 5:30 ಗಂಟೆಯವರೆಗೆ ಸುಮಾರು ಏಳು ಕಡೆಯಲ್ಲಿ ಮಂಗಳೂರಿನ ವಿವಿಧ ಕಡೆಗಳಿಗೆ ಭೇಟಿ ನೀಡಲಿರುವರು ಹಾಗೂ  ಈ ಕೆಳಗಿನ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಲಿರುವರು ಮತ್ತು ಚರ್ಚೆ ನಡೆಸುವವರು ಮಧ್ಯಾಹ್ನದ ಊಟದ ನಂತರದ  ಚರ್ಚೆಯ ಸಂದರ್ಭದಲ್ಲಿ ಹಾಗೂ ನಂತರದ ಸ್ಥಳ ವೀಕ್ಷಣೆ ನಡೆಯುವ ಸಂದರ್ಭದಲ್ಲಿಯೂ ಪತ್ರಿಕಾ ಮಿತ್ರರು ಭಾಗವಹಿಸಬೇಕೆಂದು  ಮೂಲಕ ಕೋರುತ್ತೇನೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಯುಐಡಿಎಫ್ಸಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಯೋಜನೆ

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ಯನ್ನು 60 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ ಜನಗಣತಿ 2011ರ ಪ್ರಕಾರ ಮಂಗಳೂರಿನ ಜನಸಂಖ್ಯೆ 4,88,487 ಆಗಿದ್ದು, ಕಳೆದ ಕೆಲವು ದಶಕಗಳಿಂದ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಪ್ರತಿ ವರ್ಷ ಸರಾಸರಿ 2%  ದರ ಹೆಚ್ಚುತ್ತಿದೆ ಹಾಗೂ ಬಹುಮಹಡಿ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ವಾಗುತ್ತಿದೆ.

  1. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಯುಐಡಿಎಫ್‌ ಸಿ ವತಿಯಿಂದ ಕುಂಡ್ಸೆಪ್‌ ಯೋಜನೆಯಲ್ಲಿ (2003-2014) ರೂ.218 ಕೋಟಿ ವೆಚ್ಚದಲ್ಲಿ ಒಟ್ಟು 360 ಕಿ.ಮೀ ಒಳಚರಂಡಿ ಕೊಳವೆ ಜಾಲ 20 ಹೊಸ ವೆಟ್‌ ವೆಲ್‌ ಮತ್ತು ತ್ಯಾಜ್ಯ ಸಂಸ್ಖರಣಾ ಘಟಕ (STP) ನಿರ್ಮಿಸಲಾಗಿದೆ.
  2. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಯುಐಡಿಎಫ್‌ ಸಿ ವತಿಯಿಂದ ಅಮೃತ್‌ 1.0 ಯೋಜನೆಯಲ್ಲಿ (2018-2026) ರೂ.150.58 ಕೋಟಿ ವೆಚ್ಚದಲ್ಲಿ ಒಟ್ಟು61.29 ಕಿ.ಮೀ ಒಳಚರಂಡಿ ಕೊಳವೆ ಜಾಲ ಮತ್ತು 1 ವೆಟ್‌ ವೆಲ್‌ ನ್ನು ನಿರ್ಮಿಸಲಾಗಿದೆ.
  3. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಯುಐಡಿಎಫ್‌ ಸಿ ವತಿಯಿಂದ ರಾಜ್ಯ ಸರ್ಕಾರದ ಅನುದಾನದಡಿ ಕ್ವಿಮಿಪ್‌ ಯೋಜನೆಯಲ್ಲಿ (2020-2026) ರೂ. 80 ಕೋಟಿ ವೆಚ್ಚದಲ್ಲಿ ಒಟ್ಟು 52 ಕಿಮೀ ಒಳಚರಂಡಿ ಜಾಲ 14 ಕಿ.ಮೀ ಏರುಕೊಳವೆ 3 ವೆಟ್‌ವೆಲ್‌ ಗಳು ಮತ್ತು 1.5 MLD ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ (STP) ವನ್ನು ನಿರ್ಮಿಸಲಾಗುತ್ತಿದೆ.
  4. ಪ್ರಸ್ತುತ ಅಮೃತ್‌ 1.0 ಮತ್ತು ರಾಜ್ಯ ಸರ್ಕಾರದ ಅನುದಾನದ ಕ್ವಿಮಿಪ್‌ ಯೋಜನೆಯಲ್ಲಿ ಕೆ.ಯುಐಡಿಎಫ್‌ ಸಿ ವತಿಯಿಂದ14.24% ಹೆಚ್ಚುವರಿ ಪ್ರದೇಶಕ್ಕೆ ಒಳಚರಂಡಿ ಕೊಳವೆ ಜಾಲ ಅಭಿವೃದ್ದಿ ಪಡಿಸಲಾಗಿದೆ. ಮತ್ತು ಒಟ್ಟಾರೆ 14.605 ಹೊಸ ಮನೆಗಳಿಗೆ ಒಳಚರಂಡಿ ಸಂಪರ್ಕವನ್ನು ಕಲ್ಪಿಸಲಾಗಿದೆ.
  5. ಒಟಾರೆಯಾಗಿ ಮೇಲಿನ ಯೋಜನೆಯಿಂದ ರೂ. 448.58 ಕೋಟಿ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 473 ಕಿಮೀ ಒಳಚರಂಡಿ ಕೊಳವೆ ಜಾಲವನ್ನು 2003 ರಿಂದ ಇಲ್ಲಿಯವರೆಗೆ ಅಭಿವೃದ್ದಿ ಪಡಿಸಲಾಗಿದ್ದು ನಗರ ವ್ಯಾಪ್ತಿಯಲ್ಲಿ 26.72% ಪ್ರದೇಶವು ಒಳಗೊಂಡಿರುತ್ತದೆ.

ಐವನ್‌ ಡಿʼ ಸೋಜಾ

LEAVE A REPLY

Please enter your comment!
Please enter your name here