LkG ಮತ್ತು UKG ತರಗತಿಯ ಉದ್ಘಾಟನಾ ಕಾರ್ಯಕ್ರಮ

0
68

ಶತಮಾನ ಕಂಡ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಬೋರ್ಡ ಶಾಲೆ) ನಂದಳಿಕೆ ಇಲ್ಲಿ Lkg ಮತ್ತು UKG ತರಗತಿಯ ಉದ್ಘಾಟನಾ ಕಾರ್ಯಕ್ರಮ ಬರುವ ಜೂನ್ 1ಕ್ಕೆ,ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ನಡೆಯಲಿದೆ.ಇಂಗ್ಲಿಷ್ ಶಿಕ್ಷಣದಲ್ಲಿ 15 ವರ್ಷ ಅನುಭವ ಇರುವ ಶಿಕ್ಷಕರು ಶಿಕ್ಷಣ ನೀಡಲಿದ್ದು,ಈಗಾಗಲೇ ಹಲವಾರು ವಿದ್ಯಾರ್ಥಿಗಳು ನೋಂದಾವಣೆ ಮಾಡಿದ್ದಾರೆ.

ಯಾವುದೇ ಶುಲ್ಕವಿಲ್ಲದೆ ಉಚಿತ ಶಿಕ್ಷಣ ನೀಡಲಿದ್ದು, ಬೇಕಾದ ಎಲ್ಲಾ ಪೂರ್ವ ವ್ಯವಸ್ಥೆ ಮಾಡಲಾಗಿದೆ.ಬರುವ ವರ್ಷದಿಂದ ಹಂತ ಹಂತವಾಗಿ ಒಂದನೇ ತರಗತಿಯಿಂದ ಇಂಗ್ಲಿಷ್ ಶಿಕ್ಷಣವನ್ನು ಪ್ರಾರಂಭಿಸುವ ಯೋಜನೆದ್ದು, ಇದರ ಪ್ರಯೋಜನವನ್ನು ಸುತ್ತಮುತ್ತಲಿನ ಊರಿನ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ವಿನಂತಿ. ಶಾಲಾ ಅಭಿವೃದ್ದಿ ಸಮಿತಿ ವಿದ್ಯಾವಿಕಾಸ ಸಮಿತಿ ಅಧ್ಯಾಪಕವೃಂದ ಹಾಗೂ ಹಳೆ ವಿದ್ಯಾರ್ಥಿ ಸಂಘ ಇದರ ಸಂಪೂರ್ಣ ಸಹಕಾರದೊಂದಿಗೆ ಈ ಶಾಲೆ ಮುನ್ನಡೆಯುತ್ತಿದೆ.

ಹಳೆ ವಿದ್ಯಾರ್ಥಿ ದಾನಿಗಳ ಸಹಕಾರದಿಂದ ಶಾಲಾ ಮಕ್ಕಳಿಗಾಗಿ ವಿಭಿನ್ನ ರೀತಿಯ ಕಾರ್ಯಕ್ರಮಗಳು ಶಾಶ್ವತ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ ಪ್ರೈವೇಟ್ ಶಾಲಿಕಿಂತಲೂ ಈ ಶಾಲೆ ವಿಭಿನ್ನ ವಾಗಿದ್ದು .ಪರಿಸರ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಸುಭಾಷ್ ಕುಮಾರ್ ನಂದಳಿಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here