ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ.ಉದಯ ಕುಮಾರ್ ಇರ್ವತ್ತೂರು ಬರೆದಿರುವ ‘ಲೋಕ ಗೆಂದಿನ ಗಾಂಧಿಯೆರ್’ ಪುಸ್ತಕದ ಕುರಿತಾಗಿ ವಿಚಾರ ಸಂಕಿರಣವನ್ನು ಮೇ 30ರಂದು ಸಂಜೆ 4.00ಗಂಟೆಗೆ ಮಂಗಳೂರಿನ ಬಾವುಟ ಗುಡ್ಡೆಯ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಉದ್ಘಾಟನೆ ನಡೆಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ವಹಿಸಲಿದ್ದು, ರಂಗಕರ್ಮಿ ಮತ್ತು ಸಾಹಿತಿ ಪ್ರಸಾದ್ ರಕ್ಷಿದಿ ವಿಷಯ ಪ್ರಸ್ತುತಿ ಮಾಡುವರು, ಗಾಂಧಿ ಚಿಂತಕರಾದ ಅರವಿಂದ ಚೊಕ್ಕಾಡಿ ಸಂವಾದ ನಡೆಸಿಕೊಡುವರು. ಕಾರ್ಯಕ್ರಮದಲ್ಲಿ ಲೋಕ ಗೆಂದಿನ ಗಾಂಧಿಯೆರ್ ಪುಸ್ತಕದ ಲೇಖಕ ಡಾ.ಉದಯಕುಮಾರ್ ಇರ್ವತ್ತೂರು ಮತ್ತು ಬಿ.ಪ್ರಭಾಕರ ಶ್ರೀಯಾನ್ ಉಪಸ್ಥಿತರಿರುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

