ಮಂಗಳೂರಿನಲ್ಲಿ ಸನ್ಮಾನಕ್ಕೆ ಭಾಜನರಾದ ವಿಂಧ್ಯಾ ಎಸ್ ರೈ ಕಡೇಶಿವಾಲಯ

0
25

ಮಂಗಳೂರು : ದಿನಾಂಕ 24-05-2026 ರಂದು ಮಂಗಳೂರಿನ ನಂತೂರಿನ ಸಂದೇಶ ಸಭಾಭವನದಲ್ಲಿ ಮಂಗಳೂರು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಪದಪ್ರದಾನ ಸಮಾರಂಭವು ನಡೆಯಿತು.

ಇದೇ ವೇಳೆ ಶ್ರೀಮತಿ ವಿಂಧ್ಯಾ ಎಸ್ ರೈ ಕಡೇಶಿವಾಲಯ ಇವರಿಗೆ ಸಾಧಕ ಸನ್ಮಾನವು ನಡೆಯಿತು.

ಕುರುಂಬ್ಲಾಜೆ ಗುತ್ತು ಸುಂದರ್ ರೈ ಇವರ ಪತ್ನಿಯಾದ ವಿಂಧ್ಯಾ ಎಸ್ ರೈ ಇವರು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿದ್ದು,
ಲೇಖಕಿ, ನಿರೂಪಕಿ, ಬರಹಗಾರ್ತಿ ಸಮಾಜ ಸೇವಕಿ, ಕ್ರೀಡಾ ಸಾಧಕಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿಯಾಗಿ ಬಹುಮುಖ ಪ್ರತಿಭೆಯಾದ ಇವರ ಸಾಧನಕ್ಷೇತ್ರವನ್ನು ಗುರುತಿಸಿ ಸಾಧಕ ಸಮ್ಮಾನವನ್ನು ಮಾಡಲಾಗಿತ್ತು .

ಇದೇ ವೇಳೆ ಹಿರಿಯ ಮಾರ್ಗದರ್ಶಕರು ಭುಜಬಲಿ ಧರ್ಮಸ್ಥಳ, ಆಮಂತ್ರಣ ಸಂಸ್ಥಾಪಕರು ವಿಜಯ್ ಕುಮಾರ್ ಜೈನ್, ಮಂಗಳೂರು ಘಟಕದ ಅಧ್ಯಕ್ಷರಾದ ಲತೀಶ್ ಪುತ್ರನ್, ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೀಗೆ ಹತ್ತು ಹಲವು ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನವನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here