ತುಳು ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು : ‘90ML’ ಸಿನಿಮಾ 50 ದಿನ ಪೂರೈಸಿ ಯಶಸ್ವಿ ಪ್ರದರ್ಶನ

0
14

ಮಂಗಳೂರು : ಈ ವರ್ಷದ ಬಹುಚರ್ಚಿತ ಹಾಗೂ ಯಶಸ್ವಿ ತುಳು ಸಿನಿಮಾಗಳಲ್ಲಿ ಒಂದಾದ 90ML ಇಂದಿಗೆ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ, ಮನರಂಜನೆ, ಹಾಸ್ಯ ಹಾಗೂ ಕಥಾಹಂದರದ ಮೂಲಕ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕರಾವಳಿ ಭಾಗ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಚಿತ್ರಕ್ಕೆ ಉತ್ತಮ ಬೆಂಬಲ ದೊರೆತಿದ್ದು, ತುಳು ಚಿತ್ರರಂಗಕ್ಕೆ ಮತ್ತೊಂದು ಯಶಸ್ಸಿನ ಗರಿ ಮೂಡಿಸಿದೆ.

ಚಿತ್ರತಂಡದ ಶ್ರಮ, ಕಲಾವಿದರ ಅಭಿನಯ ಹಾಗೂ ಪ್ರೇಕ್ಷಕರ ಪ್ರೋತ್ಸಾಹದಿಂದ ಸಿನಿಮಾ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದ್ದು, ತುಳು ಚಿತ್ರರಂಗದ ಬೆಳವಣಿಗೆಗೆ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಚಿತ್ರರಂಗದ ವಲಯಗಳು ಅಭಿಪ್ರಾಯಪಟ್ಟಿವೆ.

LEAVE A REPLY

Please enter your comment!
Please enter your name here