ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿಯ ಮೂಲ್ಕಿ – ಮೂಡುಬಿದಿರೆ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಸಭೆಯು ಒಬಿಸಿ ಮೋರ್ಚಾದ ಅಧ್ಯಕ್ಷರಾದ ಪ್ರದೀಪ್ ವಾಲ್ಪಾಡಿ ಇವರ ಅದ್ಯಕ್ಷತೆಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ದಿನೇಶ್ ಪುತ್ರನ್,ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾದ ಮಹೇಶ್ ಜೋಗಿ,ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ರಾವ್,ವಿನೋದ್ ಸಾಲ್ಯಾನ್,ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಶಿಧರ್ ಕಲ್ಮಜ,ಮಂಡಲದ ಕೋಶಾಧಿಕಾರಿ ಹಾಗೂ ಮಂಡಲ ಒಬಿಸಿ ಪ್ರಬಾರಿ ಪ್ರಭಾಕರ್ ಕುಲಾಲ್,ಮತ್ತು ಮೂಲ್ಕಿ – ಮೂಡುಬಿದಿರೆ ಮಂಡಲದ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಪೂಜಾರಿ ನೇತ್ತೋಡಿ,ಹೇಮಂತ್ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರೆಲ್ಲರೂ ಹಾಜರಿದ್ದರು.
ಈ ಸಂದರ್ಭದಲ್ಲಿ ಮಂಡಲಧ್ಯಕ್ಷರಾದ ದಿನೇಶ್ ಪುತ್ರನ್ ಇವರ ಉಪಸ್ಥಿತಿಯಲ್ಲಿ ಓಬಿಸಿ ಮೋರ್ಚಾದ ಎಲ್ಲಾ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕಳೆದ 8ವರ್ಷಗಳಿಂದ ಸಮಾಜಮುಖಿ ಕೆಲಸಕಾರ್ಯಗಳು, ಶೋಷಿತರು ಮತ್ತು ಬಡವರ್ಗದವರ ಪರವಾಗಿ ಪಡುಮಾರ್ನಾಡ್ ಪರಿಸರದಲ್ಲಿ ಸದಾ ದ್ವನಿ ಎತುತ್ತಿರುವ ಮತ್ತು ಶ್ರೀ ಕುಂಭಕಂಠಿಣಿ ಸಂಸ್ಥೆಯ ಪ್ರದಾನ ಸಂಚಾಲಕರಾಗಿರುವ ಪ್ರವೀಣ್. ಆರ್. ಕೋಟ್ಯಾನ್ ಇವರು ಕೂಡ ಒಬಿಸಿ ಮಂಡಲಕ್ಕೆ ಆಯ್ಕೆಯಾಗಿದ್ದಾರೆ.

