ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ರಾಹು ದೈವದ ಕುರಿತು ಭಕ್ತರಿಂದ ವ್ಯಕ್ತವಾದ ಆಶಯದಂತೆ, ಪುರೋಹಿತರು ಹಾಗೂ ಹಿರಿಯರ ಸಲಹೆಯ ಮೇರೆಗೆ ಕ್ಷೇತ್ರದ ಸಮೀಪ ರಾಹು ದೈವಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜೂನ್ 6ರಂದು ಶನಿವಾರ ಸಂಜೆ 6 ಗಂಟೆಗೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀ ಸುಕುಮಾರ್ ಬಲ್ಲಾಳ್ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಅನಂತ ಪದ್ಮನಾಭ ಭಟ್ ಅವರ ಪೌರೋಹಿತ್ಯದಲ್ಲಿ ಅಘೋರ ಹೋಮ, ಬಾದಾಹಕರ್ಷಣೆ, ಪ್ರೇತಾಕರ್ಷಣೆ ಹಾಗೂ ಅಘೋರ ಬಲಿ ಕಾರ್ಯಕ್ರಮ ನಡೆಯಲಿದೆ.
ಜೂನ್ 7ರಂದು ಭಾನುವಾರ ಬೆಳಿಗ್ಗೆ 6.30ಕ್ಕೆ ವಾಸ್ತುಪೂಜೆ, ಬಲಿ, ನವಕ ಹೋಮ ಹಾಗೂ ರಾಹು ದೈವದ ಪ್ರತಿಷ್ಠಾ ಮಹೋತ್ಸವ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸುವಂತೆ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ.
