ಕಲ್ಲಬೆಟ್ಟು ಸೇವಾ ಸಹಕಾರ ಸಂಘ ಚುನಾವಣೆ: ಕೆ. ಕೃಷ್ಣರಾಜ ಹೆಗ್ಡೆ ತಂಡಕ್ಕೆ ಭರ್ಜರಿ ಜಯ

0
33

ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕೆ. ಕೃಷ್ಣರಾಜ ಹೆಗ್ಡೆ ಅವರ ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದ್ದು, ನೂತನ ಆಡಳಿತ ಮಂಡಳಿಗೆ ಸಹಕಾರಿಗಳು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ಚುನಾವಣೆಯಲ್ಲಿ ಜಯಗಳಿಸಿದ ಪ್ರಮುಖರ ಪೈಕಿ ಹಿರಿಯ ಸಹಕಾರಿಯಾಗಿರುವ ಕೆ. ಕೃಷ್ಣರಾಜ ಹೆಗ್ಡೆ, ಸಿಪ್ರಿಯನ್ ಪಿಂಟೋ, ನಳಿನಿ ಆರ್. ಹೆಗ್ಡೆ, ರಮೇಶ್‌ಚಂದ್ರ ಪಿ. ಹಾಗೂ ಸತೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿಯು ಸಂಘದ ಅಭಿವೃದ್ಧಿ, ಸದಸ್ಯರ ಹಿತಾಸಕ್ತಿ ಹಾಗೂ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡುವ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಚುನಾವಣೆ ಬಳಿಕ ಬೆಂಬಲಿಗರು ವಿಜಯೋತ್ಸವ ಆಚರಿಸಿ, ಆಯ್ಕೆಯಾದ ಸದಸ್ಯರಿಗೆ ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here