ಮಂಗಳೂರು : SBI Card ಹಾಗೂ PhonePe ಸಹಭಾಗಿತ್ವದಲ್ಲಿ ನೀಡಲಾಗುತ್ತಿರುವ ಕೆಲವು ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿದ್ದು, ಸಾವಿರಾರು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ.
ಹೊಸ ನಿಯಮಗಳ ಪ್ರಕಾರ, PhonePe SBI Purple Card ಬಳಕೆದಾರರಿಗೆ ಆನ್‌ಲೈನ್ ಖರೀದಿಗಳ ಮೇಲೆ ದೊರೆಯುತ್ತಿದ್ದ ಗರಿಷ್ಠ 1,000 ರಿವಾರ್ಡ್ ಪಾಯಿಂಟ್‌ಗಳನ್ನು 750ಕ್ಕೆ ಇಳಿಸಲಾಗಿದೆ. ಜೊತೆಗೆ ಫೋನ್‌ಪೇ ಮೂಲಕ ಮಾಡುವ ವಿಮೆ ಪಾವತಿಗಳಿಗೆ ಗರಿಷ್ಠ 250 ಪಾಯಿಂಟ್ ಹಾಗೂ ಇತರೆ ವಹಿವಾಟುಗಳಿಗೆ 750 ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಾಗಿದೆ.
ಇದೇ ರೀತಿ PhonePe SBI Select Black Card ಬಳಕೆದಾರರಿಗೂ ರಿವಾರ್ಡ್ ಪಾಯಿಂಟ್‌ಗಳಲ್ಲಿ ಕಡಿತ ಮಾಡಲಾಗಿದೆ. ಇದುವರೆಗೆ ಫೋನ್‌ಪೇ ವಹಿವಾಟುಗಳ ಮೇಲೆ ಸಿಗುತ್ತಿದ್ದ 2,000 ಪಾಯಿಂಟ್‌ಗಳ ಬದಲು, ಇನ್ನು ಮುಂದೆ ಆನ್‌ಲೈನ್ ಖರ್ಚುಗಳಿಗೆ 1,000 ಪಾಯಿಂಟ್‌ಗಳಷ್ಟೇ ದೊರೆಯಲಿವೆ. ವಿಮೆ ಪಾವತಿಗಳಿಗೆ 500 ಪಾಯಿಂಟ್ ಹಾಗೂ ಇತರೆ ವೆಚ್ಚಗಳಿಗೆ 1,500 ಪಾಯಿಂಟ್‌ಗಳ ಮಿತಿ ವಿಧಿಸಲಾಗಿದೆ.
ಇದಲ್ಲದೆ, ಕೆಲವು ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್ ಸೌಲಭ್ಯವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಟೋಲ್ ಮತ್ತು ಬ್ರಿಡ್ಜ್ ಪಾವತಿಗಳು, ಗಿಫ್ಟ್ ಮತ್ತು ಸುವಿನೀರ್ ಖರೀದಿಗಳು, ಆಭರಣ ವಹಿವಾಟುಗಳು, ಶಿಕ್ಷಣ ಸಂಸ್ಥೆಗಳಿಗೆ ಪಾವತಿಗಳು ಹಾಗೂ ಫೋನ್‌ಪೇ ಹೊರತಾಗಿ ಮಾಡುವ ಯುಟಿಲಿಟಿ, ವಿಮೆ ಮತ್ತು ಯುಪಿಐ ವಹಿವಾಟುಗಳಿಗೆ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ದೊರೆಯುವುದಿಲ್ಲ.
ಈ ಬದಲಾವಣೆಗಳ ಕುರಿತು ಎಸ್‌ಬಿಐ ಕಾರ್ಡ್ ಈಗಾಗಲೇ ತನ್ನ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದು, ಜುಲೈ 1ರಿಂದ ಹೊಸ ನಿಯಮಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ರಿವಾರ್ಡ್ ಪಾಯಿಂಟ್‌ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದ ಗ್ರಾಹಕರಿಗೆ ಈ ನಿರ್ಧಾರ ನಿರಾಸೆ ಉಂಟುಮಾಡಿದೆ.

