ಮೂಡುಬಿದಿರೆ : ತಾಲೂಕಿನ ಪಡುಮಾರ್ನಾಡು ಗ್ರಾಮದ ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಡುಬಿದಿರೆ ವಲಯ ಸಾಮಾಜಿಕ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತು ಸಹಾಯಕ ಅರಣ್ಯ ಅಧಿಕಾರಿ ಆನಂದ್ ಅವರು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಶಾಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಇಕೋ ಕ್ಲಬ್ ಮತ್ತು ಶಾಲಾ ವನದ ಪರಿಸರದಲ್ಲಿ ಹುಣಸೆ, ಹೊಂಗೆ, ಕಹಿಬೇವು, ಬಿದಿರು, ರಾಮಪತ್ರಿ, ಜಾರಿಗೆ, ಹೆಬ್ಬಲಸು ಹೀಗೆ ವಿವಿಧ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಪ್ರತಿಜ್ಞೆ ಕೈಗೊಂಡರು.
ವಲಯ ಅರಣ್ಯಾಧಿಕಾರಿಯವರು ಪರಿಸರ ದಿನಾಚರಣೆಯ ಮಹತ್ವ ಮತ್ತು ಅಗತ್ಯವನ್ನು ಮಕ್ಕಳಿಗೆ ತಿಳಿ ಹೇಳಿದರು. ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ, ಸಹ ಶಿಕ್ಷಕ ರಾಬರ್ಟ್ ಡಿಸೋಜಾ ಸ್ವಯಂಸೇವಕ ಶಿಕ್ಷಕಿ ಪ್ರತಿಭಾ, ಪ್ರಜ್ವಲ್ ಮತ್ತು ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಉಪಸ್ಥಿತರಿದ್ದರು.
ವರದಿ ರಾಯಿ ರಾಜ ಕುಮಾರ

