ಉಡುಪಿ ಕೊಂಕಣಿ ಭರತನಾಟ್ಯ ನೃತ್ಯ ರೂಪಕ ” ಶ್ರೀನಿವಾಸ ಕಲ್ಯಾಣ “

0
7

ಉಡುಪಿ : ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ  ಇಲ್ಲಿನ ಶ್ರೀ ಲಕ್ಶ್ಮೀ  ವೆಂಕಟೇಶ ಕಲಾ ಸೇವಾ ಟ್ರಸ್ಟ್  ಉಡುಪಿ, ಗುರುಕುಲಮ್ ನೃತ್ಯ ನಾದ ಕಲಾ ಕೇಂದ್ರ  ಮಂಗಳೂರು  ಪ್ರಸುತ್ತ ಪಡಿಸಿದ – ಕೊಂಕಣಿ  ಭರತನಾಟ್ಯ ನೃತ್ಯ ರೂಪಕ ” ಶ್ರೀನಿವಾಸ ಕಲ್ಯಾಣ ”  ವನ್ನು  ವಿದ್ವಾನ್ ಉಪೇಂದ್ರ ಮಲ್ಯ ಮತ್ತು ಬಳಗ ಮಂಗಳೂರು ನೆಡೆಸಿಕೊಟ್ಟರು.  ಉಡುಪಿ  ಅಭರಣ ಜ್ಯುವೆಲ್ಲರ್ಸ್ ಇವರ ಪ್ರಯೋಜಕ್ತ್ವದಲ್ಲಿ  ದೇವಳದ   ಕಮಲಾನಾಥ ಮಂಟಪದಲ್ಲಿ   ಶನಿವಾರ  ನೆಡೆಯಿತು. 

ವೇದಿಕೆಯಲ್ಲಿ  ದೇವಳದ  ಆಡಳಿತ ಮೊಕ್ತೇಸರರಾದ ಗುಜ್ಜಾಡಿ ಪ್ರಭಾಕರ ನಾಯಕ್  ದೀಪ ಬೆಳಗಿಸಿ ಕಾರ್ಯಕ್ರಮ ಚಾಲನೆ ನೀಡಿ ಶುಭ ಹಾರೈಸಿದರು,ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು, ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಕಿಣಿ , ವಿದ್ವಾನ್   ಹರಿಪ್ರಸಾದ್ ಶರ್ಮಾ,ಮಹಿಳಾ ಮಂಡಳಿಯ  ಪೂರ್ಣಿಮಾ ರಾವ್, ರಾಧಿಕಾ ಭಟ್ ಉಪಸ್ಥರಿದ್ದರು.ಚೆಂಪಿ ರಾಮಚಂದ್ರ  ಭಟ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.         

LEAVE A REPLY

Please enter your comment!
Please enter your name here