ಶಿವಗಿರಿ ಸೊಸೈಟಿ : ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

0
8

ಶಿವಗಿರಿ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ ಬೆಳಗಾವಿ ಇವರ ವತಿಯಿಂದ ಬಿಲ್ಲವರ ಅಸೋಸಿಯೇಶನ್ ಸಹಯೋಗದೊಂದಿಗೆ ದಿನಾಂಕ 7-6-2026 ರವಿವಾರದಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ದಂತ ವೈದ್ಯರಾದ ಡಾ ತೇಜಸ್ವಿನಿ ಹೊಂಗಲ್ ರವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಸೊಸೈಟಿಯ ಅಧ್ಯಕ್ಷರಾದ ಸುಜನ್ ಕುಮಾರ್ , ಬಿಲ್ಲವ ಸಂಘದ ಅಧ್ಯಕ್ಷರಾದ ಸುನಿಲ್ ಆರ್ ಪೂಜಾರಿ ಹಾಗು ಸೊಸೈಟಿಯ ಕಟ್ಟಡ ಮಾಲಿಕರು ಹಾಗು ಉದ್ಯಮಿಗಳಾದ ಸುನಿಲ್ ನಾಯ್ಕ ರವರು ವಿದ್ಯಾರ್ಥಿಗಳು ಹಾಗು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಹಾಗು ಈ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಹಾಗು ಸಂಘದ ಹಿತೈಷಿಗಳಾದ ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಡಾ ಸುನೀತಾ ಬಂಗೇರರವರು ರೂ 11000 ದೇಣಿಗೆಯನ್ನು ನೀಡಿದರು.ನಂತರ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು . ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಪಡೆದುಕೊಂಡರು .

ಸೊಸೈಟಿಯ ನಿರ್ದೇಶಕರುಗಳು ಹಾಗು ಸಿಬ್ಬಂದಿವರ್ಗ , ಬಿಲ್ಲವ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗು ಮಹಿಳಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ವ್ಯವಸ್ಥಾಪಕರಾದ ಚಂದ್ರ ಎಚ್ ಪೂಜಾರಿ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here