ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ನಾಯಕತ್ವ ಗುಣಗಳ ವಿಕಸನ ಹಾಗೂ ಜೀವನ ಕೌಶಲ್ಯಗಳ ಅಭಿವೃದ್ಧಿಯನ್ನು ಉದ್ದೇಶವಾಗಿಟ್ಟುಕೊಂಡು, ವಿಶ್ವ ಕೊಂಕಣಿ ಕೇಂದ್ರದ ಸಹಯೋಗದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ವಸತಿ ಸಹಿತ ಚಟುವಟಿಕೆ ಆಧಾರಿತ ‘ಪ್ರಗತಿ ಸ್ಪೂರ್ತಿ ಮತ್ತು ಉನ್ನತಿ–2026’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ 2 ನೆಯ ದಿನದಂದು (26-06-2026) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉನ್ನತ ಅಧಿಕಾರಿಗಳಾದ ಚೇತನ್ ಅರೋರಾ, ಅಗ್ನೀವ ಚಕ್ರಬೋರ್ಟಿ ಮತ್ತು ಸುಜಾತ ಕುಮಾರ್ ಇವರು ಭವಿಷ್ಯದ ಆರ್ಥಿಕ ಗುರಿಗಳನ್ನು ಸಾಧಿಸಲು ಹೇಗೆ ನಿಯಮಿತವಾಗಿ ಹೂಡಿಕೆ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಹಾಗೂ ಉಳಿತಾಯ ಖಾತೆಗಳ ಅವಶ್ಯಕತೆ ಮತ್ತು ನಿರ್ವಹಣೆ ಬಗ್ಗೆ ತಿಳಿ ಹೇಳುತ್ತಾ ಆದಾಯದಲ್ಲಿ ತನ್ನ ಉಳಿತಾಯದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಸಿಗುವಂತಹ ಸವಲತ್ತುಗಳ ಬಗ್ಗೆ ಹಾಗೂ ಶಿಕ್ಷಣ ಸಾಲಗಳ ಬಗ್ಗೆ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಂವಾದದಲ್ಲಿ ಪಾಲ್ಗೊಂಡರು. ಸರಕಾರದ ಯೋಜನೆಗಳ ಅರಿವನ್ನು ಮೂಡಿಸುವುದರೊಂದಿಗೆ ಮ್ಯೂಚುವಲ್ ಫಂಡ್ಸ್ , ಎಸ್. ಐ. ಪಿ. ಯ ಅಗತ್ಯತೆ ಬಗ್ಗೆ ಮತ್ತು ನಮ್ಮಲ್ಲಿರುವ ಹಣವನ್ನು ಹೇಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಿದರು.
ಈ ಸಂಧರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ ಎ ನಂದಗೋಪಾಲ ಶೆಣೈ, ಮೆಲ್ವಿನ್ ರೊಡ್ರಿಗಸ್, ಡಿ ರಮೇಶ ನಾಯಕ್ ಮೈರಾ, ಸುಚಿತ್ರಾ ರಮೇಶ್ ನಾಯಕ್, ಡಾ. ವಿಜಯಲಕ್ಶ್ಮಿ ನಾಯಕ್, ಲಕ್ಷ್ಮಿ ಕಿಣಿ, ರವೀಂದ್ರ ನಾಯಕ್ ಕುಂಟಲ್ಪಾಡಿ, ಮತ್ತು ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಪ್ರಭು ವಗ್ಗ, ಶಿವರಾಂ ಪ್ರಭು ಮಾರಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು. ಚೇತನ್ ಶೆಣೈ ಸ್ವಾಗತಿಸಿ, ಕುಮಾರಿ ಹಿಮಾನಿ ಪ್ರಭು ಧನ್ಯವಾದವಿತ್ತರು.

