​ಮೂಡಬಿದ್ರೆಯಲ್ಲಿ ‘ಮಕ್ಕಳ ಮಂಟಪ’ ಕಾರ್ಯಕ್ರಮ:- ಬಾಲಪ್ರತಿಭೆಗಳಿಗೆ ಸನ್ಮಾನ ಹಾಗೂ ಗೌರವ ಸಮರ್ಪಣೆ.,

0
1

-ಮಂದಾರ ರಾಜೇಶ್ ಭಟ್
​ಮೂಡಬಿದಿರೆ :-ವಾಯ್ಸ್ ಆಫ್ ಆರಾಧನಾ ತಂಡ ಮತ್ತು ತುಳುನಾಡು ವಾರ್ತೆ ಯುಟ್ಯೂಬ್ ಚಾನೆಲ್ ಇವುಗಳ ಜಂಟಿ ಸಹಯೋಗದೊಂದಿಗೆ ಮೂಡಬಿದ್ರೆಯಲ್ಲಿ ‘ಮಕ್ಕಳ ಮಂಟಪ’ (ವಾಯ್ಸ್ ಆಫ್ ಆರಾಧನಾ ಪ್ರತಿಭೆಗಳ ಕಾರ್ಯಕ್ರಮ) ಎಂಬ ವಿಶೇಷ ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

​ದಿನಾಂಕ 28-06-2026ರ ಆದಿತ್ಯವಾರದಂದು ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾಭ್ಯಾಸ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಕರಾವಳಿಯ ಹೆಮ್ಮೆಯ ಬಾಲಪ್ರತಿಭೆಗಳನ್ನು ಗುರುತಿಸಿ, ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

​ಸನ್ಮಾನಿತ ಸಾಧಕ ಬಾಲಪ್ರತಿಭೆಗಳ ವಿವರ:-

​ಪ್ರಗ್ಯಾ ಬಜಪೆ: ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ ಜೂನಿಯರ್’ ಕಾರ್ಯಕ್ರಮದ ವಿಜೇತೆಯಾದ ಬಾಲಪ್ರತಿಭೆ ಪ್ರಗ್ಯಾ ಬಜಪೆ ಅವರನ್ನು ಈ ಸಂದರ್ಭದಲ್ಲಿ ಪ್ರಮುಖವಾಗಿ ಸನ್ಮಾನಿಸಲಾಯಿತು.

ಸುನಿಕ್ಷಾ ಪೂಜಾರಿ ಮಾರ್ನಾಡ್:-

ಅಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಸುರೇಂದ್ರ ಪೂಜಾರಿ ಮತ್ತು ಆಶಾ ಸುರೇಂದ್ರ ದಂಪತಿಯ ಪುತ್ರಿ.

​ಸ್ವಸ್ತಿ:- ಮೂಡಬಿದ್ರೆಯ ಜೈನ್ ಹೈಸ್ಕೂಲ್ ವಿದ್ಯಾರ್ಥಿನಿ, ಸುರೇಂದ್ರ ಮತ್ತು ನಳಿನಿ ದಂಪತಿಯ ಪುತ್ರಿ.

ಕಾರ್ಯಕ್ರಮದ ನಿರ್ವಹಣೆ:-

​ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ವಿದ್ಯಾರ್ಥಿನಿ ಹಾಗೂ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳಾ ಗುರುಪ್ರಸಾದ್ ಮೇರ್ಕಜೆ ದಂಪತಿಯ ಪುತ್ರಿಯಾದ ಶ್ರೇಯಾ ಸುಳ್ಯ ಅವರು ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಆಯೋಜಕರು ಹಾಗೂ ಗಣ್ಯರು ಉಪಸ್ಥಿತರಿದ್ದು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

​ಈ ಸುಂದರ ಮತ್ತು ಅರ್ಥಪೂರ್ಣ ಕಾರ್ಯಕ್ರಮವು ‘ತುಳುನಾಡು ವಾರ್ತೆ’ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರಗೊಂಡಿದ್ದು, ನೆರೆದಿದ್ದ ಸಾರ್ವಜನಿಕರು ಹಾಗೂ ಕಲಾಭಿಮಾನಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here