ಇತರರನ್ನು ನಮ್ಮಂತೆ ಪ್ರೀತಿಸುವುದೇ ಉದಾತ್ತ ಧರ್ಮ: ಡಾ. ವಾಮನ್ ರಾವ್ ಬೇಕಲ್

0
23

ಮಹಾ ನಗರ: ಮಂಗಳೂರು ಏಕ ದಿನ ಸಾಹಿತ್ಯ ಅಭಿಯಾನ

ಕಾಸರಗೋಡು : ದಿನಾಂಕ 28.06.26 ರಂದು ಶ್ರೀ ನಾಗ ಕನ್ನಿಕಾ ರಕ್ತೇಶ್ವರಿ ದೈವ ಸ್ಥಾನ ಅಂಬಾವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು ಇಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ ರಿ ಕನ್ನಡ ಭವನ ಪ್ರಕಾಶನ , ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ ಕನ್ನಡದ ನಡಿಗೆ… ಮಕ್ಕಳ ಕಡೆಗೆ ಧರ್ಮ ಶಿಕ್ಷಣ ರಸ ಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಡಾ. ಅರುಣ್ ಉಳ್ಳಾಲ್ ಪ್ರಧಾನ ಸಂಚಾಲಕರು ಅಂಬಾವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು, ಸ್ವಾಗತಿಸಿದರು.

ಹಾಗೂ ಅಂಬಾವನ ದೇವಸ್ಥಾನ ಅಧ್ಯಕ್ಷರು ಸುಂದರ ಗಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉಮೇಶ್ ರಾವ್ ಕುಂಬಳೆ ಕಾರ್ಯಧ್ಯಕ್ಷರು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲೆ ಪ್ರಾಸ್ತಾವಿಕ ನುಡಿಯೊಂದಿಗೆ ರಸಪ್ರಶ್ನೆ ಕೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕರು ಕೇಂದ್ರ ಸಮಿತಿ ಕಾಸರಗೋಡು ವಿದ್ಯಾರ್ಥಿಗಳನುದ್ದೇಶಿಸಿ ಧರ್ಮದ ತಳಹದಿಯಲ್ಲಿ ಬದುಕಲು ತೊಡಗುವುದೇ ಸಂಸ್ಕೃತಿಯ ಬದುಕು.. ಧರ್ಮ, ನಮ್ಮ ಸಾಮಾಜಿಕ ಪ್ರತಿಭದ್ಧತೆ, ಇತರರನ್ನು ನಮ್ಮಂತೆ ಪ್ರೀತಿಸುವುದೇ ಉದಾತ್ತ ಧರ್ಮ ಎಂದು ನುಡಿದರು.

ಅತಿಥಿ ಶ್ರೀಮತಿ ಸಂಧ್ಯಾ ರಾಣಿ ಪ್ರಕಾಶಕಿ ಕನ್ನಡ ಭವನ ಕಾಸರಗೋಡು, ಪ್ರತಿಮಾ ಗೋಪಾಲಕೃಷ್ಣ, ಸರೋಜಾ ಧನಂಜಯ, ಮೀನಾಕ್ಷಿ ರಮೇಶ್, ಶ್ರೀ ದೇವಿದಾಸ ಉಳ್ಳಾಲ, ಶ್ರೀ ಲಕ್ಷ್ಮೀಕಾಂತ , ಶ್ರೀ ಮಿಥುನ್ ಕೃಷ್ಣ ನಗರ , ಉಪಸ್ಥಿತರಿದ್ದರು.

ರೇಖಾ ಸುದೇಶ್ ರಾವ್ ಜಿಲ್ಲಾಧ್ಯಕ್ಷರು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರು ಕನ್ನಡ ಸಾಹಿತ್ಯ ಹಾಗೂ ಧರ್ಮ ಶಿಕ್ಷಣದ ಕುರಿತಾಗಿ ರಸ ಪ್ರಶ್ನೆಯೊಂದಿಗೆ ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದಗೈದರು. ರಸಪ್ರಶ್ನೆಯಲ್ಲಿ ಸುಮಾರು 65 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ 30 ರಷ್ಟು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ವಿದ್ಯಾರ್ಥಿ ಅಕ್ಷಜ್ ಲಕ್ಷ್ಮೀಕಾಂತ್ ಹುಟ್ಟು ಹಬ್ಬದ ಪ್ರಯುಕ್ತ ಮಹಿಳೆಯರು ಆರತಿ ಬೆಳಗುವುದರೊಂದಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಶ್ಲೋಕ ಪಠಣೆ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಉಪಹಾರವನ್ನು ನೀಡಲಾಯಿತು.

LEAVE A REPLY

Please enter your comment!
Please enter your name here