ಗ್ರಾಹಕ ಹಿತ ರಕ್ಷಣಾ ಕಾಯಿದೆ 2019ರ ಬಗ್ಗೆ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ವಿಚಾರ ಸಂಕಿರಣ

0
8

ಮಂಗಳೂರು : ಎಸ್ ಡಿ ಎಂ ಕಾನೂನು ಕಾಲೇಜು, ಉನ್ನತ ಪದವಿಯ ಕಾನೂನು ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ ಕ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ ಮತ್ತು ಕೆನರಾ ಚೇಂಬರ್ ಆಫ್ ಕಾಮರ್ಸ್ ಗಳ ಜಂಟಿ ಆಶ್ರಯದಲ್ಲಿ ಜೂನ್ 29ರಂದು ಎಸ್ಟಿಎಂ ಕಾನೂನು ಕಾಲೇಜಿನ ಕಾನ್ಸರೆನ್ಸ್ ಹಾಲಿನಲ್ಲಿ ವಿಚಾರ ಸಂಕಿರಣ ಇಡೀ ದಿನ ನಡೆಯಿತು.

ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯ ಅಧ್ಯಕ್ಷ ಟಿ ಜಿ ಶಿವಶಂಕರಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಕೇಂದ್ರಿಕೃತ ಗ್ರಾಹಕ ನ್ಯಾಯದಾನದ ಸಂದರ್ಭದಲ್ಲಿ ಜಿಲ್ಲಾಮಟ್ಟದ ಜಿಲ್ಲಾ ಗ್ರಾಹಕ ಮಂಡಳಿಗಳು, ಜಿಲ್ಲಾ ಗ್ರಾಹಕ ಆಯೋಗಗಳು, ಜಿಲ್ಲಾ ಗ್ರಾಹಕ ಮೇಲೂ ಉಸ್ತುವಾರಿ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಅಂತಹ ಕ್ರಮದಲ್ಲಿರುವ ಸಾಧಕ ಬಾದಕಗಳ ಬಗ್ಗೆ ಚರ್ಚಿಸುವುದಕ್ಕೆ ಈ ವಿಚಾರ ಸಂಕಿರಣವನ್ನು ಆಯೋಜಿಸಿರುವುದು ಬಹಳ ಉತ್ತಮವಾದಂತಹ ಕೆಲಸ ಎಂಬುದಾಗಿ ಎಸ್ ಡಿ ಎಂ ಕಾನೂನು ಕಾಲೇಜಿನ ಪ್ರಯತ್ನವನ್ನು ಶ್ಲಾಘಿಸಿದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಹೇಶ್‌ ಚಂದ್ರನಾಯಕ್ ಸ್ವಾಗತಿಸಿದರು. ಡಿಯೋನ ಕಾರ್ಯಕ್ರಮ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಿದ ಅತ್ಯುತ್ತಮ ವಿಷಯಗಳಿಗೆ ನಗದು ಬಹುಮಾನವನ್ನು ಕೂಡ ಇಡಲಾಗಿತ್ತು. ಡಾ ಎಫ್ ಎಸ್ ಪಾಟೀಲ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ವರದಿ : ರಾಯಿ ರಾಜ್ ಕುಮಾರ್

LEAVE A REPLY

Please enter your comment!
Please enter your name here